ಜೆಡಿಎಸ್ ಗೆ ಶಾಕ್ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕಿಳಿದ ಪ್ರೀತಂಗೌಡ ಪಡೆ

ಹಾಸನ: ಪ್ರೀತಂಗೌಡ ಅತ್ಯಾಪ್ತರು ದಳಪತಿಗಳಿಗೆ ಬಿಗ್ ಶಾಕ್ ನೀಡಿದ್ದು, ಬಹಿರಂಗವಾಗಿ ಕಾಂಗ್ರೆಸ್ ಆಭ್ಯರ್ಥಿ ಶ್ರೇಯಸ್ ಪಟೇಲ್ ಪರ ಪ್ರಚಾರಕ್ಕಿಳಿಸಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಬಲಗೈ ಬಂಟ ಉದ್ದೂರು ಪುರುಷೋತ್ತಮ್ ಸೇರಿ ಹಲವರು ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್‌ಪಟೇಲ್ ಭೇಟಿ ಮಾಡಿದ ಪ್ರೀತಂಗೌಡ ಅತ್ಯಾಪ್ತರು ಉದ್ದೂರು ಪುರುಷೋತ್ತಮ್ ನೇತೃತ್ವದಲ್ಲಿ ಬೆಂಬಲ ಘೋಷಿಸಿ ಪ್ರಚಾರ ಆರಂಭಿಸಿದರು.

ಪ್ರೀತಂಗೌಡ ಅವರು ಎನ್.ಡಿ.ಎ. ಅಭ್ಯರ್ಥಿ ಪರ ನಿಲುವು ತಳೆದು ಸೂಚನೆ ನೀಡಿದ ಹಿನ್ನೆಲೆಯಲ್ಲಿ ಪ್ರಜ್ವಲ್‌ರೇವಣ್ಣ ವಿರುದ್ಧ ಶ್ರೇಯಸ್‌ಪಟೇಲ್‌ಗೆ ಬೆಂಬಲ ವ್ಯಕ್ತಪಡಿಸಿದರು.