ಸಿಗರನಹಳ್ಳಿ ವಿಜಯಕುಮಾರ್ ಗೆ ರೋಹಿತ್ ರಾಜಣ್ಣ ಮಾಧ್ಯಮ ಪ್ರಶಸ್ತಿ

ಹಾಸನ: ಭಾರತೀಯ ಸಮೂಹ ಮಾಧ್ಯಮ ಮತ್ತು ಸಂಶೋಧನಾ ಸಂಸ್ಥೆ ಕೊಡಮಾಡುವ ರೋಹಿತ್ ರಾಜಣ್ಣ ಪತ್ರಿಕೋದ್ಯಮ ಪ್ರಶಸ್ತಿಗೆ ಪ್ರಜಾವಾಣಿಯ ಚಿಕ್ಕಮಗಳೂರು ಜಿಲ್ಲಾ ವರದಿಗಾರ ವಿಜಯಕುಮಾರ್ ಸಿಗರನಹಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.

ಮೂಲತಃ ಹಾಸನ ಜಿಲ್ಲೆಯ ಸಿಗರನಹಳ್ಳಿಯವರಾದ ವಿಜಯ್‌ಕುಮಾರ್, ಸದ್ಯ ಪ್ರಜಾವಾಣಿಯ ಚಿಕ್ಕಮಗಳೂರು ವರದಿಗಾರರಾಗಿದ್ದಾರೆ.

ಹಾಸನದ ಜ್ಞಾನದೀಪ, ಹಾಸನಮಿತ್ರ, ಜನಮಿತ್ರ, ವಿಜಯವಾಣಿ ಪತ್ರಿಕೆಗಳಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ.

‘ಬೂದಿಯಾಗದ ಕೆಂಡ’ ಇವರು ಬರೆದ ಕೃತಿ 2015ರಲ್ಲಿ ಪ್ರಕಟವಾಗಿದೆ. ಇದರಲ್ಲಿರುವ ‘ಅನ್ನಕ್ಕಾಗಿ ರಾತ್ರಿಯಿಡೀ ಕಾದದ್ದು’ ಎಂಬ ಲೇಖನವು ಮೈಸೂರು ವಿಶ್ವವಿದ್ಯಾನಿಲಯದ ಬಿ.ಎ ನಾಲ್ಕನೇ ಸೆಮಿಸ್ಟರ್ ಗೆ ಪಠ್ಯವಾಗಿದೆ.

ರಾಜ್ಯದ ಗಮನ ಸೆಳೆದಿದ್ದ ಸಿಗರನಹಳ್ಳಿ ಅಸ್ಪೃಶ್ಯತೆ ವಿರೋಧಿ ಹೋರಾಟ ವಿಜಯಕುಮಾರ್ ಅವರ ವರದಿಯಿಂದಲೇ ಹೊತ್ತಿದ ಕಿಡಿಯಾಗಿತ್ತು.