ಹೊಳೆನರಸೀಪುರ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ದೇವರಾಜೇಗೌಡ ವಿಚಾರಣೆ

ಪೆಡ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ಎಸ್ಐಟಿ ವಶಕ್ಕೆ ಪಡೆಯುವ ಸಾಧ್ಯತೆ

ಹಾಸನ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಜಾತಿ ನಿಂದನೆ ಮಾಡಿದ ಪ್ರಕರಣಗಳ ಸಂಬಂಧ ನಿನ್ನೆ ರಾತ್ರಿ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದ ಬಿಜೆಪಿ ಮುಖಂಡ ಜಿ. ದೇವರಾಜೇಗೌಡ ಅವರನ್ನು ಹೊಳೆನರಸೀಪುರ ಪೊಲೀಸರು ಮುಂಜಾನೆ 4.30 ರ ಸುಮಾರಿಗೆ ಹೊಳೆನರಸೀಪುರಕ್ಕೆ ಕರೆತಂದಿದ್ದಾರೆ.

ದೇವರಾಜೇಗೌಡ ಅವರನ್ನು ಕರೆತಂದ ಹಳ್ಳಿಮೈಸೂರು ಹಾಗೂ ಬಾಣಾವರ ಪಿಎಸ್‌ಐ, ಹೊಳೆನರಸೀಪುರದದ ವೃತ್ತ ನಿರೀಕ್ಷರ ಠಾಣೆಯಲ್ಲಿ ಇರಿಸಿದ್ದು, ಶೀಘ್ರವೇ ವಿಚಾರಣೆ ಆರಂಭಿಸಲಿದ್ದಾರೆ.

ವಿಚಾರಣೆ ಬಳಿಕ ಇಂದು ಸಂಜೆಯೊಳಗೆ ದೇವರಾಜೇಗೌಡರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದು, ಪೆನ್ ಡ್ರೈವ್ ಹಂಚಿಕೆ ಪ್ರಕರಣ ಸಂಬಂಧ ವಿಚಾರಣೆಗೆ ಎಸ್ಐಟಿ ಕೂಡ ವಶಕ್ಕೆ ಪಡೆಯುವ ಸಾಧ್ಯತೆ ಇದೆ.