ಹಾಸನ: ಮೈಕ್ರೋಫೈನಾನ್ಸ್ ಕಿರುಕುಳ; ಕಾಳೇನಹಳ್ಳಿ ಗ್ರಾಮಸ್ಥರಿಗೆ ಪೊಲೀಸರ ಅಭಯ

ಹಾಸನ: ಅರಕಲಗೂಡು ತಾಲ್ಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಮೈಕ್ರೋಫೈನಾನ್ಸ್ ಏಜೆಂಟ್‌ ಮನೆ ಬಾಗಿಲಿನಲ್ಲಿ ಹೆಲ್ಮೆಟ್ ಹಾಕಿಕೊಂಡು ಕುಳಿತು ಕಿರುಕುಳ ನೀಡಿದ ಪ್ರಕರಣದ ವರದಿ ಗಮನಿಸಿದ ಪೊಲೀಸರು ಗ್ರಾಮಕ್ಕೆ ತೆರಳಿ ಅಭಯ ನೀಡಿದ್ದಾರೆ.

ಗ್ರಾಮಕ್ಕೆ ಕೊಣನೂರು ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಕೆ.ಎನ್. ಗಿರೀಶ್ ಭೇಟಿ ನೀಡಿ ಗ್ರಾಮಸ್ಥರ ಅಳಲು ಆಲಿಸಿದರು. ಮೈಕ್ರೋ ಫೈನಾನ್ಸ್ ಗಳಿಂದ ಸಾಲ ಪಡೆದವರು, ಕಂಪೆನಿಯ ಏಜೆಂಟ್‌ಗಳು ಸಾಲ ತೀರಿಸುವಂತೆ ಬೆಳಿಗ್ಗೆ-ರಾತ್ರಿ ಮನೆಗೆ ಬಂದು ಕಿರುಕುಳ ನೀಡುತ್ತಿದ್ದಾರೆ ಎಂದು ವಿವರಿಸಿದರು.

ಗ್ರಾಮಸ್ಥರ ಮನವಿ:
ನಮಗೆ ಸಾಲ ತೀರಿಸುವುದು ಸಾಧ್ಯವಿದೆ, ಆದರೆ ಕಾಲಾವಕಾಶ ಕೊಡಿ ಎಂದು ಅವರು ಮನವಿ ಮಾಡಿದರು. ಏಜೆಂಟರ ಕಿರುಕುಳದಿಂದಾಗಿ ಹಲವು ಮಂದಿ ಗ್ರಾಮವನ್ನು ತೊರೆಯಲು ಮುಂದಾಗಿದ್ದಾರೆ ಎಂದರು.

ಪೊಲೀಸರ ಭರವಸೆ:
ಸಬ್‌ಇನ್ಸ್‌ಪೆಕ್ಟರ್ ಗಿರೀಶ್ ಪ್ರತಿಕ್ರಿಯಿಸ, “ಇನ್ಮುಂದೆ ಯಾರೂ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳುತ್ತೇವೆ. ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ತಕ್ಷಣ ಮಾಹಿತಿ ನೀಡಿ,” ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.