ಹಾಸನ: ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ಐನೆಟ್ ವಿಜಯ್ ಕುಮಾರ್ ಮೇಲೆ ಪ್ರೀತಂಗೌಡ ಬೆಂಬಲಿಗರ ಹಲ್ಲೆ ಆರೋಪ ಪ್ರಕರಣ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಹಲ್ಲೆಗೊಳಗಾದ ಆರ್.ಎಸ್.ಎಸ್. ಸ್ವಯಂ ಸೇವಕ ಬಿಜೆಪಿ ಮುಖಂಡ ವಿಜಯ್ ದೂರು ಆಧರಿಸಿ ಸುರೇಶ್, ಕಿರಣ್, ಮೋಹನ್, ಅಭಿಷೇಕ್, ಪವನ್ ಎಂಬವರನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದರು.
ಆರೋಪಿಗಳನ್ನು ಪೊಲೀಸರು ನ್ಯಾಯಾಧೀಶರ ಎದುರು ರಾತ್ರಿಯೇ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಐವರು ಆರೋಪಿಗಳಿಗೆ ಜಾಮೀನು ನೀಡಿದರು.
ಹಲ್ಲೆಯಲ್ಲಿ ಗಾಯಗೊಂಡ ವಿಜಯ್ ಕುಮಾರ್, ಪ್ರಮೋದ್ ಹಾಗೂ ಸಂದೇಶ್ ಹಿಮ್ಸ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಕ್ಕೆ ಪ್ರೀತಂಗೌಡ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿತ್ತು.