X ನಲ್ಲಿ ಪ್ರಜ್ವಲ್ ರೇವಣ್ಣ ಪ್ರತ್ಯಕ್ಷ, ಏನಂದ್ರು ಗೊತ್ತಾ?

ಹಾಸನ: ಜನಪ್ರಿಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬುಧವಾರ ಮಧ್ಯಾಹ್ನ ಪ್ರತ್ಯಕ್ಷವಾಗಿರುವ ಸಂಸದ ಪ್ರಜ್ವಲ್ ರೇವಣ್ಣ, ವಿಚಾರಣೆಗೆ ಹಾಜರಾಗಲು ಏಳು ದಿನಗಳ ಸಮಯಾವಕಾಶ ಕೋರಿ ವಕೀಲರ ಮೂಲಕ ಎಸ್.ಐ.ಟಿ.ಗೆ ಮನವಿ ಪತ್ರ ಕಳುಹಿಸಿದ್ದಾರೆ.

ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ ವಕೀಲರ ಮೂಲಕ ಸಿ.ಐ.ಡಿ.‌ ಬೆಂಗಳೂರು ಅವರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರದಲಿದೆ ಎಂದು ಬರೆದಿರುವ ಅವರು ತನ್ಮ ವಕೀಲರ ಮನವಿ ಪತ್ರ ಪೋಸ್ಟ್ ಮಾಡಿದ್ದಾರೆ.