ಹಾಸನ: ಕಾರ್ಯಕರ್ತರ ಸಭೆಯ ವೇದಿಕೆ ಮೇಲೆಯೇ ತಮ್ಮ ಪುತ್ರ, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಮೇಲೆಯೇ ಮಾಜಿ ಸಚಿವ ಎಚ್. ಡಿ. ರೇವಣ್ಣ ರೇಗಿದರು.
ಬೇಲೂರು ಪಟ್ಟಣದ ಚನ್ನಕೇಶವ ದೇವಾಲಯದ ಮುಂಭಾಗ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪುತ್ರನ ಮೇಲೆಯೇ ರೇವಣ್ಣ ಅಸಮಾಧಾನ ಹೊರಹಾಕಿದರು.
ತಮ್ಮ ಭಾಷಣದ ವೇಳೆ ಕೇಂದ್ರಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಲ್ಲಿ ಸಹಾಯ ಮಾಡಿತು ಅನ್ನುವುದನ್ನು ವಿವರಿಸುವ ಸಂಧರ್ಭದಲ್ಲಿ ವೇದಿಕೆಯಲ್ಲಿದ್ದ ಶಾಸಕರೊಂದಿಗೆ ಸಂಸದರು ಮಾತನಾಡುತ್ತಿದ್ದರು. ಪ್ರಜ್ವಲ್ ನಡೆಯಿಂದ ಸಿಟ್ಟಿದ್ದ ರೇವಣ್ಣ ತಾವು ಸುಮ್ಮನೆ ಸೈಲೆಂಟಾಗಿರಬೇಕು ನನಗೆ ಗೊತ್ತಿದೆ ಎಂದು ರೆಬೆಲ್ ಆದರು.
ಆ ಕ್ಷಣಕ್ಕೆ ಸುಮ್ಮನಾದ ಸಂಸದ ಕೆಲ ಕ್ಷಣಗಳಲ್ಲೆ ಮಾತು ಮುಂದುವರಿಸಿದ್ದರಿಂದ ಕಿರಿಕಿರಿಗೊಳಗಾದ ರೇವಣ್ಣ, ನನಗೆ ಗೊತ್ತಿದೆ ನಾನು ಹೇಳ್ತಿನಿ, ನೀವು ಸುಮ್ಮನಿರಬೇಕು ಅಂತ ಸಿಟ್ಟಿಗೆದ್ದರು. ಆಗ ಪ್ರಜ್ವಲ್ ಅನಿವಾರ್ಯವಾಗಿ ಸುಮ್ಮನಾದರು.