ಹಾಸನ: ಯಾವುದೇ ಗ್ಯಾರೆಂಟಿ ಕಾರ್ಯಕ್ರಮ ವಾಪಾಸ್ ಪಡೆಯಲ್ಲ. ಎಲ್ಲ ಗ್ಯಾರೆಂಟಿಗಳನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಏನಾದರೂ ಹೇಳಲಿ. ನಮ್ಮ ಕಾಂಗ್ರೆಸ್ ಹೈಕಮಾಂಡ್ ಗ್ಯಾರೆಂಟಿ ಬಗ್ಗೆ ಯಾರೂ ಮಾತನಾಡಬಾರದು ಸ್ಪಷ್ಟವಾಗಿ ಹೇಳಿದ್ದಾರೆ. ಗ್ಯಾರೆಂಟಿ ವಿಚಾರವಾಗಿ ಯಾರೂ ಯಾವುದೇ ಅನುಮಾನ ಇಟ್ಟುಕೊಳ್ಳುವುದು ಬೇಡ. ಏನಿದೆಯೋ ಅದು ಯಥಾಸ್ಥಿತಿ ಮುಂದುವರೆಯುತ್ತದೆ.
ದೆಹಲಿ ಮುನಿಯಪ್ಪ ಅವರ ತವರು, ಸ್ವಂತ ಊರು. ಮಂತ್ರಿಯಾದ ಕ್ಷಣ ವೈಯಕ್ತಿಕ ಅಭಿಪ್ರಾಯ ಹೇಳಬಾರದು ಅಂತ ಏನಿಲ್ಲ. ಯಾರು ಏನೇ ಹೇಳಿದರೂ ಅದು ವೈಯುಕ್ತಿಕ ಅಭಿಪ್ರಾಯ. ಯಾವುದೇ ಕಾರಣಕ್ಕೂ ಗ್ಯಾರೆಂಟಿ ನಿಲ್ಲಿಸಲ್ಲ. ಸತೀಶ್ ಜಾರಕಿಹೊಳಿ ಅವರೂ ಸಭೆಯಲ್ಲಿ ಇದ್ದರು. ಕೆ.ಸಿ.ವೇಣುಗೋಪಾಲ್, ಸುರ್ಜೇವಾಲ ಅವರಿಬ್ಬರು ಕೂಡ ಗ್ಯಾರೆಂಟಿ ವಿಷಯದಲ್ಲಿ ಗೊಂದಲ ಉಂಟು ಮಾಡಬಾರದು ಎಂದು ಹೇಳಿದ್ದಾರೆ ಎಂದರು.