ನವದೆಹಲಿ : ರೂಮ್ ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಭಾರತೀಯ ಆಡಳಿತ ಸೇವೆ (ಐಎಸ್) ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ದೆಹಲಿಯ ರಾಜೇಂದ್ರಗಾಗಿ ನಡೆದಿದೆ.
ಅಂಜಲಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಮಹಾರಾಷ್ಟ್ರ ಅಕೋಲಾ ನಗರದ ನಿವಾಸಿ. ಬಾಡಿಗೆ ಜಾಸ್ತಿ ಮಾಡಿದ್ದಕ್ಕೆ ಹಣ ಕಟ್ಟಲಾಗದೆ ಸಾವನ್ನಪ್ಪಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಐಎಎಸ್ ಪರೀಕ್ಷೆಗಾಗಿ ರಾಜೀಂದ್ರ ನಗರದ ಬಾಡಿಗೆ ಮನೆಯಲ್ಲಿದ್ದರು. ಖಿನ್ನತೆ ಮತ್ತು ಜೀವನದ ತೊಂದರೆಯಿಂದಾಗಿ, ಜೀವನ ಸಾಗಿಸಲು ಕಷ್ಟವಾಗಿದೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.ಡೆಟ್‌ನೋಟ್‌ನಲ್ಲಿ ಅಂಜಲಿ, ಅಪ್ಪ, ಅಮ್ಮನಿಗೆ ಕ್ಷಮಿಸಿ. ನನ್ನ ಚೆನ್ನಾಗಿಯೇ ನೀವು ಬೆಳೆಸಿದ್ದೀರಿ. ಆದರೆ ಈಗ ಜೀವನದಲ್ಲಿ ನಿಜವಾಗಿಯೂ ಬೇಸರಗೊಂಡಿದ್ದೇನೆ. ಸಮಸ್ಯೆಗಳೇ ಹೆಚ್ಚಾಗಿವೆ.
ನನಗೆ ಶಾಂತಿ ಬೇಕು. ನನ್ನ ಖಿನ್ನತೆ ಶಮನಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟೆ ಆದರೆ ಸಾಧ್ಯವಾಗಲಿಲ್ಲ. ಮೊದಲ ಪ್ರಯತ್ನದಲ್ಲೇ ಯುಪಿಎಸ್ ಪಾಸ್ ಮಾಡಬೇಕಿತ್ತು. ಅದು ಆಗಲಿಲ್ಲ. ಪಿಜಿ ಮತ್ತು ಹಾಸ್ಟೆಲ್ ರೆಂಟ್ ಕೂಡ ಜಾಸ್ತಿ ಮಾಡಿ ವಿದ್ಯಾರ್ಥಿಗಳಿಂದ ಎಲ್ಲರು ಹಣ ಲೂಟಿ ಮಾಡುತ್ತಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ.