ಬೆಂಗಳೂರು, ಏಪ್ರಿಲ್ 01: ನೆಲಮಂಗಲ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಭರತ್ ಆರ್.ಗೌಡ ಪ್ರಸಸಕ್ತ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಮತ್ತು ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಅವರ ಜೇಷ್ಠತೆ ಮತ್ತು ಸಮರ್ಪಣೆಯನ್ನು ಗುರುತಿಸಿ,ರಾಜ್ಯ ಸರ್ಕಾರ ಈ ಗೌರವಕ್ಕೆ ಆಯ್ಕೆ ಮಾಡಿದೆ. ಏ.2 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದಕ ಪ್ರದಾನ ಮಾಡಲಿದ್ದಾರೆ.
ಬಿ.ಆರ್.ಗೌಡ ಅವರು ಸಕಲೇಶಪುರ ಗ್ರಾಮಾಂತರ, ಹಾಸನ ನಗರ ಸಂಚಾರ ಠಾಣೆಗಳಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ, ಮಂಡ್ಯ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.
ಅಭಿನಂದನೆ:
ಹಾಸನ ಬಿಜೆಪಿ ಮುಖಂಡ ಮಳಲಿ ಶರತ್ ಹಾಗೂ ಸಂಸದ ಶ್ರೇಯಸ್ ಪಟೇಲ್ ಮಾಧ್ಯಮ ಸಲಹೆಗಾರ ಮಳಲಿ ಸ್ವರೂಪ್ ಅವರು ಮುಖ್ಯಮಂತ್ರಿ ಚಿನ್ನದ ಪದಕ ಗೌರವಕ್ಕೆ ಪಾತ್ರರಾಗಿರುವ ಬಿ.ಆರ್.ಗೌಡ ಅವರನ್ನು ಅಭಿನಂದಿಸಿದ್ದಾರೆ.