ಹಾಸನ: ಭಾರಿ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ರಸ್ತೆ ಬದಿಯ ಹಳ್ಳಕ್ಕೆ ಇಳಿದ ಘಟನೆ ಆಲೂರು ತಾಲ್ಲೂಕಿನ ಮಣಿಗನಹಳ್ಳಿ ಗ್ರಾಮದ ಬಳಿ ನಡೆದಿದೆ.
ಆಲೂರಿನಿಂದ ಪುರಭೈರವನಹಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಹಾಸನ ವಿಭಾಗದ KA-13 F- 2103 ನಂಬರ್‌ನ ಸಾರಿಗೆ ಬಸ್ ಮಳೆಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ.
ಘಟನೆಯಲ್ಲಿ ಕೆಲವು ಬಸ್ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬದಲಿ ಬಸ್ ನಲ್ಲಿ ಪ್ರಯಾಣಿಕರಿಕರನ್ನು ಕಳುಹಿಸಲಾಯಿತು. ಆಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.