ಹಾಸನ: ಬೈಕ್‌ಗೆ ಥಾರ್ ಜೀಪ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಆಲೂರು ತಾಲ್ಲೂಕಿನ ಮಗ್ಗೆ ಬಳಿ ನಡೆದಿದೆ.
ರಾಯರಕೊಪ್ಪಲಿನ ಹೇಮಂತ್ (20) ಮೃತಪಟ್ಟ ಯುವಕ. ಬೈಕ್‌ನಲ್ಲಿ ಕ್ಯಾನ್ ಇರಿಸಿಕೊಂಡು ಮಗ್ಗೆಯಿಂದ ಡೀಸೆಲ್ ತೆಗೆದುಕೊಂಡು ತೆರಳುತ್ತಿದ್ದ ಆತನಿಗೆ ಎದುರಿನಿಂದ ಬಂದ ಪ್ರದೀಪ್ ಎಂಬವರಿಗೆ ಮಹೀಂದ್ರ ಥಾರ್ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಹೇಮಂತ್ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ನಂತರ ಚಾಲಕ ಜೀಪ್ ಬಿಟ್ಟು ಪರಾರಿಯಾಗಿದ್ದಾನೆ.
ಆಲೂರು ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.