ಹಿಂದಿನಿಂದ ಗುದ್ದಿದ ಮಿನಿಲಾರಿ, ಗೂಡ್ಸ್ ಆಟೋ ಚಾಲಕ ಸಾವು, ಪತ್ನಿ ಸ್ಥಿತಿ ಗಂಭೀರ

ಡಿಕ್ಕಿ ರಭಸಕ್ಕೆ ನುಜ್ಜುಗುಜ್ಜಾಗಿರುವ ಆಟೋ

ಹಾಸನ : ಗೂಡ್ಸ್ ಆಟೋಗೆ ಹಿಂಬದಿಯಿಂದ ಮಿನಿ ಕ್ಯಾಂಟರ್ ಡಿಕ್ಕಿಯಾಗಿ ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಸಾವೆ ಬಳಿ ನಡೆದಿದೆ.

ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನಿವಾಸಿ ಇಬ್ರಾಹಿಂ (45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ ಪತ್ನಿ ಜೊತೆ ತಮ್ಮ ಗೂಡ್ಸ್ ಆಟೋದಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದ ಇಬ್ರಾಹಿಂ ಅವರ ಆಟೋಗೆ ವೇಗವಾಗಿ ಬಂದ ಮಿನಿ ಕ್ಯಾಂಟರ್ ಡಿಕ್ಕಿ ಹೊಡೆದಿದೆ.

ಇಬ್ರಾಹಿಂ ಪತ್ನಿ ಸ್ಥಿತಿ ಗಂಭೀರವಾಗಿದ್ದು, ಗಾಯಾಳುವಿಗೆ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಡಿಕ್ಕಿ ರಭಸಕ್ಕೆ ಗೂಡ್ಸ್ ಆಟೋ ನಜ್ಜುಗುಜ್ಜಾಗಿದ್ದು ಹಿರೀಸಾವೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.