ಸತ್ಯಮಂಗಲ ನಾಗಣ್ಣ ನಿಧನ: ಇಂದು ಅಂತ್ಯಕ್ರಿಯೆ

ಹಾಸನ: ನಗರ ಹೊರವಲಯದ ಸತ್ಯಮಂಗಲ ನಿವಾಸಿ ನಾಗರಾಜು (ನಾಗಣ್ಣ) ಫೆ.28ರ ರಾತ್ರಿ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ರಿಂಗ್ ರಸ್ತೆಯ ಸತ್ಯಮಂಗಲ ಗೇಟ್ ಸಮೀಪ ನಡೆದ ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದು ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ನಾಗರಾಜು ಅವರು ಜನಾನುರಾಗಿಯಾಗಿದ್ದರು. ಶನಿವಾರ ಬೆಳಗ್ಗೆ 8ಗಂಟೆಗೆ ಸತ್ಯ ಮಂಗಲದ ಅವರ ಸ್ವಗೃಹದಲ್ಲಿ ಅವರ ಮೃತ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ತೋಟದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಮೃತರ ಪುತ್ರ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಕುಮಾರ್,ಸಿಆರ್ಪಿಎಫ್ ಸಬ್ ಇನ್ಸ್ಪೆಕ್ಟರ್ ರಾಜೇಶ್ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ‌.

ನೇತ್ರದಾನ: ನಾಗರಾಜು ಅವರು ಈ ಮೊದಲೆ ನೇತ್ರದಾನ ಮಾಡಿದ್ದು,ಅವರ ಮರಣ ನಂತರ ಅವರ ಇಚ್ಛೆಯಂತೆ ಅವರ ಕುಟುಂಬಸ್ಥರು ಮೃತರ ನೇತ್ರಗಳನ್ನು ದಾನ ಮಾಡಿ
ಅಂಧರ ಬಾಳಿಗೆ ದೃಷ್ಟಿ ನೀಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.