ಹಾಸನದ ಪೊಲೀಸ್ ಸಂಕೀರ್ಣದ‌ ನಾಲ್ಕನೇ ಮಹಡಿಯಿಂದ ಜಿಗಿದವನ ಕತೆ ಏನಾಯಿತು?

ಹಾಸನ: ನಗರದ ಎನ್.ಆರ್. ವೃತ್ತದಲ್ಲಿರುವ ಪೊಲೀಸ್ ಸಂಕೀರ್ಣದ ನಾಲ್ಕನೇ‌ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೊಳೆನರಸೀಪುರ ತಾಲ್ಲೂಕಿನ ಡೊಡ್ಡಕಾಡನೂರು ಮಲ್ಲೇನಹಳ್ಳಿ ನಿವಾಸಿ ಸುನೀಲ್ (30) ಮೃತ ವ್ಯಕ್ತಿ.

ಹಾಸನ ಪೊಲೀಸ್ ಉಪಾಧೀಕ್ಷಕರ ಕಚೇರಿ, ನಗರ ಠಾಣೆ, ಗ್ರಾಮಾಂತರ ಪೊಲೀಸ್ ಠಾಣೆ, ಸಿಇಎನ್ ಪೊಲೀಸ್ ಠಾಣೆಗಳಿರುವ ಪೊಲೀಸ್ ಸಂಕೀರ್ಣದ ಎಲ್ಲ ಕಚೇರಿಗಳಿಗೂ ಹೋಗಿ ಸುತ್ತಾಡಿ ಬಂದಿರುವ ಆತನ ನಂತರ ಕಟ್ಟಡದ ನಾಲ್ಕನೇ ಮಹಡಿಗೆ ಕೆಳಕ್ಕೆ ಜಿಗಿದಿದ್ದಾನೆ.

ಇದರಿಂದ ಆತನ ತಲೆ, ಮುಖಕ್ಕೆ ಗಂಭೀರ ಗಾಯಗಳಾದವು, ಸ್ಥಳದಲ್ಲಿದ್ದ ಪೊಲೀಸರು ಆತನನ್ನು ನಗರದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.