ಸಿಎಂ ಸೀಟ್ ಖಾಲಿ ಎಲ್ಲಿದೆ?: ಸಂಸದ ಶ್ರೇಯಸ್ ಪಟೇಲ್ ಪ್ರಶ್ನೆ

ಹಾಸನ: ಜಾತಿ ಗಣತಿ ಜಾರಿ ಸಂಬಂಧ ಹಾಸನದಲ್ಲಿ ಪ್ರತಿಕ್ರಿಯಿಸಿದ ಸಂಸದ ಶ್ರೇಯಸ್‌ಪಟೇಲ್, ವರದಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಕೈಯ್ಯಲ್ಲಿ ಇದೆ. ಒಳ್ಳೆಯ ತೀರ್ಮಾನಕ್ಕೆ ಬರ್ತಾರೆ, ಆ ತೀರ್ಮಾನಕ್ಕೆ ನಾವು ಬದ್ದವಾಗಿರುತ್ತೇವೆ ಎಂದರು.

ಈ ವಿಷಯವಾಗಿ ಅಂತಿಮವಾಗಿ ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡ್ತಾರೆ. ಅಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡುವ ತೀರ್ಮಾನವೇ ಅಂತಿಮವಾಗಿರುತ್ತದೆ. ಕ್ಯಾಬಿನೆಟ್‌ನಲ್ಲಿ ಒಳ್ಳೆಯ ರೀತಿ ತೀರ್ಮಾನ ಆಗುತ್ತೆ ಅದರಲ್ಲಿ ಯಾವುದೇ ಸಂಶಯ ಬೇಡ ಎಂದರು.

ನನ್ನ ವೈಯುಕ್ತಿಕ ತೀರ್ಮಾನ ಒಂದೇ. ರಾಜ್ಯ ಸರ್ಕಾರ, ಸಿಎಂ, ಡಿಸಿಎಂ ತೀರ್ಮಾನವೇ ಅಂತಿಮ. ಸರ್ಕಾರ ಬಿಟ್ಟು ನಾವ್ಯಾರು ಮಾತನಾಡಬಾರದು. ನಮ್ಮ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಅದೇ ಅಂತಿಮ ಎಂದರು.

ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಸೀಟ್ ಎಲ್ಲಿ ಖಾಲಿ ಇದೆ ಮುಖ್ಯಮಂತ್ರಿಯಾಗಿ ಜನಮೆಚ್ಚಿದ ನಾಯಕ ಸಿದ್ದರಾಮಯ್ಯ ಸಾಹೇಬ್ರು ಇದ್ದಾರಲ್ಲಾ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ನಮ್ಮ, ನಮ್ಮ ಕೆಲಸ ಇರುತ್ತೆ ಹೋಗ್ತೀವಿ, ಭೇಟಿ ಮಾಡಿ ಬರ್ತಿವಿ ಅಷ್ಟೇ ಎಂದರು.