ಹಾಸನ: ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದಲ್ಲಿ ಇಂದು ನಡೆದ ಈದ್ ಮಿಲಾದ್ ಹಬ್ಬದ ಮೆರವಣಿಗೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಭಾಗವಹಿಸಿ ಹೆಜ್ಜೆ ಹಾಕುತ್ತಾ ನೃತ್ಯ ಮಾಡಿ ಗಮನ ಸೆಳೆದರು.
ನಗರದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗಿಯಾಗಿ ಮುಸ್ಲಿಂ ಬಾಂಧವರನ್ನು ಆಲಂಗಿಸಿ ಶುಭ ಹಾರೈಸಿದ ಸಂಸದರು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದರು.
ಬಳಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಮುಸಲ್ಮಾನರ ಪ್ರಮುಖ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಈದ್ ಮಿಲಾದ್ ಪವಿತ್ರ ಹಬ್ಬವಾಗಿದೆ. ಪ್ರೀತಿ, ಭ್ರಾತೃತ್ವದ ಸಂಕೇತವಾಗಿರುವ ಈ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ಈದ್ ಮಿಲಾದ್ ಹಬ್ಬದ ಶುಭಾಶಯ ಕೋರುವುದಾಗಿ ಹೇಳಿದರು.
‘ನಾನು ಸಂಸದನಾಗಲು ಮುಸ್ಲಿಂ ಸಮುದಾಯದ ಮತದಾರರ ಕೊಡುಗೆ ಅಪಾರವಾಗಿದೆ ಅವರಿಗೆ ಎಂದಿಗೂ ಋಣಿಯಾಗಿರುತ್ತೇನೆ. ಈ ಪವಿತ್ರ ಹಬ್ಬದಲ್ಲಿ ಭಾಗವಹಿಸಿ ನನಗೆ ಮೈ ರೋಮಾಂಚನದ ಅನುಭವವಾಗಿದೆ ಎಂದು ಹೇಳಿದರು