ಹಾಸನ : ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಸಂಸದ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಆಕ್ರೋಶ ಹೊರಹಾಕಿದರು.
ಆರೋಗ್ಯ ತಪಾಸಣೆಗೆ ಹಿಮ್ಸ್ ಗೆ ತೆರಳಿದ್ದ ಸಂದರ್ಭ ಮಾಧ್ಯಮಗಳ ಕ್ಯಾಮರಾ ಕಡೆಗೆ ತಿರುಗಿ ತಮ್ಮ ಆಕ್ರೋಶ ಹೊರಹಾಕಿದರು.
ತುಂಬಾ ವಿಷಯಗಿಳಿವೆ ಕಾಲ ಬರಲಿ ಎಲ್ಲಾ ಹೇಳ್ತೇನೆ. ಎಷ್ಟು ಪಿತೂರಿ ಮಾಡುತ್ತಿದ್ದಾರೆ ಎನ್ನುವುದನ್ನ ಬಹಿರಂಗವಾಗಿಯೇ ಹೇಳ್ತೀನಿ. ಯಾರ‌್ಯಾರ ಕೈವಾಡವಿದೆ ಎನ್ನುವ ಬಗ್ಗೆ ಎಲ್ಲವನ್ನೂ ಹೇಳ್ತೇನೆ ಎಂದರು.
ಯಾರನ್ನ ನೀವು ನಿಷ್ಠಾವಂತ ಅಧಿಕಾರಿ ಎನ್ನುತ್ತಿದ್ದೀರೋ ಅವರ ನಿಷ್ಠೆ ಯಾರಿಗೆ ಅನ್ನುವುದನ್ನು ಹೇಳುತ್ತೇನೆ. ನಮ್ಮನ್ನ ರಾಜಕೀಯವಾಗಿ ಮುಗಿಸಲು ವ್ಯವಸ್ಥಿತ ಪಿತೂರಿ ನಡೆಸುತ್ತಿದ್ದಾರೆ. ನಮ್ಮ ಅಣ್ಣನನ್ನು ಟಾರ್ಗೆಟ್ ಮಾಡ್ತಿದ್ದಾರೆ. ಇದೆಲ್ಲಾ ವ್ಯವಸ್ಥಿತವಾಗಿಯೇ ಆಗ್ತಾ ಇದೆ ಎಂದು ಆರೋಪಿಸಿದರು.
ನೀವು ಯಾರನ್ನು ನಿಷ್ಠಾವಂತ ಅಧಿಕಾರಿ ಎನ್ನುತ್ತಿದ್ದೀರೋ ಅವರ ಬಗ್ಗೆ ಮಾಧ್ಯಮದ ಮುಂದೆ ಬಂದು ಮಾತಾಡುತ್ತೇನೆ ಎಂದು ಆಕ್ರೋಶ ಹೊರಹಾಕಿದರು.