ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಪ್ರಜ್ವಲ್ ಗರಂ!

ಹಾಸನ : ತಮ್ಮ ವಿರುದ್ಧ ವಾಗ್ದಾಳಿ ಮಾಡುತ್ತಿರುವ ಜಿಲ್ಲಾ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಸಂಸದ ಪ್ರಜ್ವಲ್‌ರೇವಣ್ಣ ಹೇಳಿಕೆ ಚುನಾವಣೆ ಬಂದಿರುವ ಕಾರಣಕ್ಕಾಗಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

ಹಾಸನದಲ್ಲಿ ಮಂಗಳವಾರ ಮಾತನಾಡಿದ ಅವರು, ಚುನಾವಣೆ ಮುಗಿದ ಮೇಲೆ ಅವರೇ ಶೆಡ್ ಆಗ್ತಾರೆ, ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳಲು ಹೋಗಬಾರದು.
ನನ್ನ ಮೇಲೆ ಪ್ರೆಸ್‌ಮೀಟ್ ಮಾಡಿದ್ರೆ ಏನೂ ಸಿಗಲ್ಲ, ಇವರಿಗೆ ಒಂದು ಅವಕಾಶ ದೇವರು ಕೊಟ್ಟಿದ್ದಾನೆ.

ನನ್ನ ಮೇಲೆ ಪ್ರೆಸ್‌ಮೀಟ್ ಮಾಡುವ ಬದಲು ರೈತರಿಗೆ ಅನುಕೂಲವಾಗುವ, ಜನರಿಗೆ ಒಳ್ಳೆಯದಾಗುವ ಕಾಮಗಾರಿಗಳಿಗೆ ಅನುದಾನ ತರಲಿ, ನನಗೆ ಬೈದರೆ ಅವರಿಗೆ ಏನು ಸಿಗುತ್ತೆ, ಇವೆಲ್ಲವನ್ನೂ ನೋಡಿಕೊಂಡು ಬಂದಿದ್ದೇನೆ.

ಕಾಂಗ್ರೆಸ್ ಇತಿಹಾಸ ತೆಗುದ್ರೆ, ಬರಿ ಎಲೆಕ್ಣನ್ ಆರು ತಿಂಗಳು ಮುಂಚೆ ವೈಟ್ ಅಂಡ್ ವೈಟ್ ಬಟ್ಟೆ ಹಾಕ್ತಾರೆ. ಬಂದು ನಮಗೆ ಬೈತರೆ, ಮೇಲೆ ಎಲೆಕ್ಷನ್‌ನಲ್ಲಿ ಸೋಲ್ತಾರೆ, ಆಮೇಲೆ ಮನೆಗೆ ಹೋಗ್ರಾರೆ ಅಷ್ಟೇ, ಇನ್ನೇನು ಆಗಲ್ಲ ಎಂದರು.

ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇದು ಟೆಕ್ನಿಕಲ್ ಇಶ್ಯೂ, ನಮ್ಮಲ್ಲಿ ಕೋರ್ ಕಮಿಟಿ ಇದೆ.ಕೋರ್ ಕಮಿಟಿ ಮಾಡಿದ್ರೆ ಉತ್ತರ ಸಿಗುತ್ತೆ ನಾನು ಕಮಿಯಲ್ಲಿ ಸದಸ್ಯನಲ್ಲ, ನಾನು ರಾಷ್ಟ್ರೀಯ ಕಮಿಟಿಯಲ್ಲಿ ಇದ್ದೇನೆ. ಅವರು ರಾಷ್ಟ್ರೀಯ ಕಮಿಟಿ ಮೆಂಬರ್ ಇದ್ರು ಈಗ ಅಮಾನತು ಮಾಡಿದ್ದಾರೆ
ರಾಷ್ಟ್ರೀಯ ಕಮಿಟಿ ಮೀಟಿಂಗ್ ಕೇರಳದ ನಾಣಿಯವರು ಕರೆಯಲು ಬರಲ್ಲ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ಕಮಿಟಿ ಸಭೆಯನ್ನು ದೇವೇಗೌಡರು ಕರೆಯಬೇಕು. ಈಗ ಐದು ರಾಜ್ಯಗಳಿಂದ ರಾಷ್ಟ್ರೀಯ ಕಮಿಟಿಯಲ್ಲಿ 76 ಜನ ಇದ್ದೇವೆ.
76 ಜನರಲ್ಲಿ ಅವತ್ತು ನಾಲ್ಕು ಜನ ಸಭೆ ಸೇರಿದ್ದಾರೆ. ನಾಲ್ಕು ಜನ ಸೇರಿ ಹೊಸ ಕಮಿಟಿ ಮಾಡಲ್ಲ. ಎಲ್ಲರೂ ಒಟ್ಟಿಗೆ ಸೇರಿ ರಾಷ್ಟ್ರೀಯ ಕಮಿಟಿಗೆ ಸೇರುವ ಕೆಲಸ ಮಾಡಬೇಕು ಎಂದರು.

ಶೀಘ್ರದಲ್ಲೇ ದೇವೇಗೌಡರು ಅದಕ್ಕೆ ಸರಿಯಾದ ಉತ್ತರ ಕೊಡ್ತಾರೆ. ರಾಷ್ಟ್ರೀಯ ಕಮಿಟಿಯ ಸಭೆ ಕರೆಯುತ್ತಾರೆ. ಅದರಲ್ಲಿ ಭಾಗವಹಿಸಿ ಯಾರ‌್ಯಾರಿಗೆ ಶಕ್ತಿ ತುಂಬಬೇಕು  ಅವರಿಗೆ ತುಂಬ್ತಿವಿ.

ಲೋಕಸಭಾ ಚುನಾವಣೆಯಲ್ಲಿ 28 ಕ್ಕೆ 28 ಸ್ಥಾನ ಗೆಲ್ತಿವಿ ಎಂಬ ಬಿಜೆಪಿ ರಾಜ್ಯಾದ್ಷಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ಗೆ ಪ್ರತಿಕ್ರಿಯಿಸಿದ ಅವರು,
ನೂರಕ್ಕೆ ನೂರು, ಒಂದು ಕಡೆ ವಿಜಯೇಂದ್ರ, ಇನ್ನೊಂದು ಕಡೆ ಕುಮಾರಸ್ವಾಮಿ ಇಬ್ಬರು ಕೂಡ ಡೈನಾಮಿಕ್ ಲೀಡರ್‌ಗಳು
ಎಲ್ಲೋ ಒಂದು ಕಡೆ ನಮ್ಮ ಹೊಂದಾಣಿಕೆಗೆ ಶಕ್ತಿ ಸಿಕ್ಕಂತೆ ಆಗಿದೆ.
ಹೋರಾಟ ಮಾಡಲು ನಾವೆಲ್ಲರೂ ತಯಾರಾಗಿದ್ದೇವೆ ಎಂದರು.

ಪ್ರತಿಯೊಬ್ಬ ಜೆಡಿಎಸ್-ಬಿಜೆಪಿ ಕಾರ್ಯಕರ್ತಯ ಒಟ್ಟಾಗಿ ಸೇರಿಕೊಂಡು ಈ ಚುನಾವಣೆ ಫೇಸ್ ಮಾಡ್ತಿವಿ 28 ಕ್ಷೇತ್ರಗಳನ್ನು ಗೆಲ್ಲತ್ತೇವೆ ಎಂದರು.