ಗೂಂಡಾಗಿರಿಯಿಂದ ಖಾಸಗಿ ಆಸ್ಪತ್ರೆಗಳಿಗೆ ರಕ್ಷಣೆ ಬೇಕಾಗಿದೆ; ಡಾ.ಉಮೇಶ್‌ ಕಳವಳ

ಹಾಸನ: ಖಾಸಗಿ ಆಸ್ಪತ್ರೆಗಳ ಹೆಸರು ಹಾಳು ಮಾಡುವ ಬೆದರಿಕೆ, ಧಮ್ಕಿ ಪ್ರಕರಣಗಳಿಂದ ನಗರದ ಆರೋಗ್ಯ
ವ್ಯವಸ್ಥೆ ಕುಸಿಯುವ ಸಾಧ್ಯತೆ ಇದೆ ಎಂದು ಎಂಎAಎA ಆಸ್ಪತ್ರೆ ಸಿಇಒ ಡಾ.ಉಮೇಶ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಟ್ರಾಮಾ ಸೆಂಟರ್ ನಡೆಸುತ್ತಿದ್ದೇವೆ. ನಾನೇ ಮುಂದೆ ನಿಂತು ರೋಗಿಗಳ ಚಿಕಿತ್ಸೆ ನಿಗಾವಹಿಸುತ್ತಿದ್ದೇನೆ. ರೋಗಿಯ ಜೀವ ಉಳಿಸುವುದೇ ನಮ್ಮ ಆದ್ಯತೆಯಾಗಿರುತ್ತದೆ.
ಆದರೂ ಕೆಲವೊಮ್ಮೆ ಚಿಕಿತ್ಸೆ ಪಡೆದು ಹಣ ಕಟ್ಟದೆ ಹೋಗುವ, ಪ್ರತಿಭಟನೆ ಮಾಡುವ ಬೆಳವಣಿಗೆ ನಡೆಯುವುದು ದುರದೃಷ್ಟಕರ ಎಂದರು. ಇತ್ತೀಚೆಗೆ ಮೆದುಳಿಗೆ ಪೆಟ್ಟು ಬಿದ್ದ ರೋಗಿ ಗಂಭೀರ ಸ್ಥಿತಿಯಲ್ಲಿ ಬಂದರು. ಅವರಿಗೆ ಶಸ್ತçಚಿಕಿತ್ಸೆ ಅಗತ್ಯವಿತ್ತು.
ರೋಗಿ ಒಪ್ಪಿದ ನಂತರ ಶಸ್ತç ಚಿಕಿತ್ಸೆ ಮಾಡಿದೆವು. ಮೊದಲು ನಮ್ಮ ನಿಬಂಧನೆಗಳಿಗೆ ಒಪ್ಪಿ ಸಹಿ ಮಾಡಿದರು. ನಾನು ಡಾ.ಸಿ.ಎನ್.ಮಂಜುನಾಥ್ ಅವರ ಅಭಿಮಾನಿ ಅವರ ಮಾರ್ಗದಂತೆ ನಮ್ಮಲ್ಲಿ ಚಿಕಿತ್ಸೆ ಮೊದಲು, ಹಣ ಪಾವತಿ ನಂತರ ಎನ್ನುವ ಆದ್ಯತೆ ಪಾಲಿಸುತ್ತಿದ್ದೇವೆ.
೩೬ ದಿನ ರೋಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದರು. ಇನ್ನೂ ಚಿಕಿತ್ಸೆ ಅಗತ್ಯ ಇದ್ದರೂ ಬೇರೆಡೆ ಕರೆದೊಯ್ಯುವ ನಿರ್ಧಾರ ಮಾಡಿದರು. ೧೦ಲಕ್ಷ ಬಿಲ್ ಆಗಿತ್ತು. ನಾನು ೬ ಲಕ್ಷ ಬಿಲ್ ರಿಯಾಯಿತಿ ಮಾಡಿಕೊಟ್ಟೆ. ಆದರೆ ರೋಗಿ ಕಡೆಯವರು ಕೇವಲ ಐವತ್ತು ಸಾವಿರ ನೀಡುವುದಾಗಿ ಹೇಳಿದರು. ಏನೇ ಹೇಳಿದರೂ ಕೇಳದೆ ಗಲಾಟೆ ಮಾಡಿದರು. ಕಡೆಗೆ ಬಿಲ್ ನೀಡದೆ ಹೋದರು ಎಂದು ದೂರಿದರು.
ಹೀಗಾದರೆ ಆಸ್ಪತ್ರೆ ನಡೆಸುವುದು ಹೇಗೆ ಎನ್ನುವ ಬೇಸರ ಮೂಡುತ್ತಿದೆ. ಕೆಲವು ಸಂಘ ಸಂಸ್ಥೆಗಳು ಆಸ್ಪತ್ರೆ ಹೆಸರು ಹಾಳು ಮಾಡುವ ಬೆದರಿಕೆ ಹಾಕುತ್ತಾರೆ. ಗಲಾಟೆಯೇ ಅವರ ಉದ್ದೇಶವಾಗಿರುತ್ತದೆ ಎಂದು ಅಸಮಾಧಾನ ಹೊರ ಹಾಕಿದರು.
ಕಾರ್ಯದರ್ಶಿ ಮಂಜಪ್ಪ ಮಾತನಾಡಿ, ನಗರದ ಎಲ್ಲ ಆಸ್ಪತ್ರೆಗಳಲ್ಲಿಯೂ ಇಂತಹ ಸಮಸ್ಯೆ ಇದೆ. ರೋಗಿಗಳು ಬಿಲ್ ಕಟ್ಟುವ ಸಮಯದಲ್ಲಿ ಕೆಲವರು ಮಧ್ಯಪ್ರವೇಶಿಸಿ ಗಲಾಟೆ ಎಬ್ಬಿಸಿ, ಗೂಂಡಾಗಿರಿ ಮಾಡುವ, ಆಸ್ಪತ್ರೆ ಸಿಬ್ಬಂದಿಯನ್ನು ಬೆದರಿಸುವ, ಆ ಮೂಲಕ ಆಸ್ಪತ್ರೆ ಹೆಸರು ಹಾಳು ಮಾಡುವ ತಂತ್ರ ಅನುಸರಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳಿಂದ ಆಗುವ ತೊಂದರೆ ತಪ್ಪಬೇಕು ಎಂದರು.