ಬೆಂಗಳೂರು- ಹಾಸನ ನಡುವೆ ರಾಜ್ಯದ ಪ್ರಥಮ ನಮೋ ರಾಪಿಡ್ ರೈಲು?: ಸಚಿವ ಸೋಮಣ್ಣ ಸುಳಿವು

ತುಮಕೂರು: ಬೆಂಗಳೂರು- ತುಮಕೂರು-ಹಾಸನ ನಡುವೆ ನಮೋ ರ‌್ಯಾಪಿಡ್ ರೈಲು ತರಲು ಚಿಂತನೆ ನಡೆದಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ತುಮಕೂರಿನ ಶೆಟ್ಟಿಹಳ್ಳಿ ಕೆಳಸೇತುವೆ ಬಳಿ ಪಾದಚಾರಿ ಮಾರ್ಗಕ್ಕೆ ಶಿಲಾನ್ಯಾಸ ನೆರವೇ ರಿಸಿದ ಬಳಿಕ ಮಾತನಾಡಿದ ಸಚಿವರು, ಶೀಘ್ರ ಸರ್ಕ್ಯೂಲರ್‌ರೈಲು ಪ್ರಾರಂಭಿಸುವ ಸುಳಿವು ನೀಡಿದರು.

287 ಕಿ.ಮೀ. ವಿಸ್ತೀರ್ಣದ ಸರ್ಕ್ಯೂಲರ್‌ ರೈಲನ್ನು ಆರಂಭಿಸಲಾಗುವುದು. ಮೆಮೋ ರೈಲನ್ನು ತುಮಕೂರಿನಿಂದ ಬೆಂಗಳೂರಿಗೆ ಮಾಡಿದ್ದೇವೆ. ಇದೀಗ ಮೈಸೂರಿಗೂ ವಿಸ್ತರಿಸಲಾಗಿದೆ. ತುಮಕೂರಿನವರೆಗೆ ಮೆಟ್ರೋ ವಿಸ್ತರಿಸಲು ರಾಜ್ಯ ಸರ್ಕಾರ ಮನವಿ ಮಾಡಿದೆ. ಅದಕ್ಕೇನು ಮಾಡಬೇಕೋ ಅದನ್ನು ಮಾಡುತ್ತಿದ್ದೇವೆ ಎಂದರು.