ನನ್ನ ಮೇಲಿನ ಎಫ್ಐಆರ್ ರಾಜಕೀಯ ಷಡ್ಯಂತ್ರ: ಡಾ.ಸೂರಜ್ ರೇವಣ್ಣ ಫಸ್ಟ್ ರಿಯಾಕ್ಷನ್

ಹಾಸನ: ತಮ್ಮ ಮೇಲಿನ ಲೈಂಗಿಕ ದೌರ್ಜನ್ಯ ಆರೋಪವನ್ನು ನಿರಾಕರಿಸಿರುವ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಇದೊಂದು ರಾಜಕೀಯ ಷಡ್ಯಂತ್ರ ಎಂದಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನ್ನ ಮೇಲಿನ ಆರೋಪವನ್ನು ಖಡಾಖಂಡಿತವಾಗಿ ತಿರಸ್ಕರಿಸುತ್ತೇನೆ. ನಾನು ಯಾವುದನ್ನೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಈಗಾಗಲೇ ಎಫ್ಐಆರ್ ಆಗಿದೆ.

ನನಗೆ ಕಾನೂನಿನ ವ್ಯವಸ್ಥೆ ಮೇಲೆ ನಂಬಿಕೆ ಇದೆ. ನಮ್ಮ ನಾಡಿನ ಕಾನೂನಿನ ಮೇಲೆ ವಿಶ್ವಾಸ ಇದೆ. ನಮ್ಮ ವಿರುದ್ಧ ನಡೆದಿರುವ ಷಡ್ಯಂತ್ರಕ್ಕೆ ಕಾಲವೇ ಉತ್ತರ ನೀಡಲಿದೆ. ಇನ್ನು ಮುಂದೆಯೂ ನಮ್ಮ ಕುಟುಂಬ ಜನಾನುರಾಗಿ ಮಾಡಿಕೊಂಡು ಬಂದಿರುವ ಜನಸೇವೆಯನ್ನು‌ ಮುಂದುವರಿಸುತ್ತದೆ ಎಂದರು.