ಹಾಸನದ ಪ್ರಮುಖ ಸಮಗ್ರ ಸುದ್ದಿಗಳು ತಿಳಿಯಿರಿ.

ಹಾಸನದಲ್ಲಿ ಸೋಮವಾರ ಅನೇಕ ಬೆಳವಣಿಗೆಗಳು ಕಂಡುಬಂದಿದ್ದು ಜಿಲ್ಲೆಯ ಹಾಗೂ ವಿವಿಧ ತಾಲೂಕು ಕೇಂದ್ರಗಳ ಪ್ರಮುಖ ಸುದ್ದಿಗಳನ್ನು ತಿಳಿಯೋಣ ಬನ್ನಿ..

ಲೋಕಾಯುಕ್ತರ ದಾಳಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಗೋಪಾಲ್ ಎಚ್ ಆರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ..

ಹಾಸನ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಗೋಪಾಲ್ ಎಚ್ ಆರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನೇರ ಸಾಲ ನೀಡಲು 2 ಲಕ್ಷ ರೂಪಾಯಿ ಲಂಚ ಪಡೆಯಲು ಮುಂಗಡವಾಗಿ 40 ಸಾವಿರ ಹಣ ಪಡೆಯುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.

ಸೋಮವಾರ ಸಂಜೆ 4:30ರ ಸಂದರ್ಭದಲ್ಲಿ ಲೋಕಾಯುಕ್ತರು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿ ಅಧಿಕಾರಿಯನ್ನು ಹಿಡಿದಿದ್ದಾರೆ.ನೇತೃತ್ವವನ್ನು ಲೋಕಾಯುಕ್ತ ಅಧಿಕಾರಿಗಳಾದ ಶ್ರೀಮತಿ ಶಿಲ್ಪ ಹಾಗೂ ಬಾಲು ವಹಿಸಿಕೊಂಡಿದ್ದರು.

ಬೆಳೆ ನಷ್ಟ ಪರಿಹಾರಕ್ಕಾಗಿ ಆಗ್ರಹಿಸಿ ರೈತರ ಪ್ರತಿಭಟನೆ

ಹಾಸನ: ತುಂಡುಭೂಮಿಗಾಗಿ ಮತ್ತು ಬೆಳೆ ನಷ್ಟ ಪರಿಹಾರಕ್ಕಾಗಿ ಆಗ್ರಹಿಸಿ ಸೋಮವಾರ ರೈತ ಸಂಘ ಹಾಗು ಹಸಿರು ನಿಶಾನೆ( ಕೋಡಿ ಹಳ್ಳಿ ಬಣ) ಯಿಂದ ಬೃಹತ್ ಪ್ರತಿಭಟನೆ ನಡಡೆಸಲಾಯಿತು. ನಗರದ ಹೇಮಾವತಿ ಪ್ರತಿಮೆ ಬಳಿ ಜಮಾಯಿಸಿದ ನೂರಾರು ರೈತರು ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

 

ಸಕಲೇಶಪುರ : ಕೇರಳ ಹಾಗೂ ಮಂಗಳೂರು ಭಾಗಕ್ಕೆ ನಿತ್ಯನಿರಂತರ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತಹ ಘಟನೆ ಭಾನುವಾರ ರಾತ್ರಿ ಸಕಲೇಶಪುರ ಬೈಪಾಸ್ ರಸ್ತೆಯಲ್ಲಿ ನಡೆದಿದೆ.

ಭಾನುವಾರ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಬಜರಂಗದಳ ಕಾರ್ಯಕರ್ತರಿಗೆ ಹಾಸನ ಭಾಗದಿಂದ ಬೈಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವೇಗವಾಗಿ ಬಂದ ಕಂಟೈನರ್ ವಾಹನವನ್ನು ಬೆನ್ನಟ್ಟಿರುವ ಬಜರಂಗದಳ ಕಾರ್ಯಕರ್ತರು ನಗರದ ಬೈಪಾಸ್ ರಸ್ತೆ ಟೊಲ್ ಗೇಟ್ ಬಳಿ ಪೋಲಿಸರು ಸಹಯೋಗದಲ್ಲಿ ಏಂ 06 ಅ 6919 ಕಂಟೈನರ್ ವಾಹನವನ್ನು ತಡೆದಿದ್ದಾರೆ.

ಕಂಟೈನರ್ ಪರಿಶೀಲಿಸಲಾಗಿ ವಾಹನದೊಳಗೆ ಮೇಲ್ನೋಟಕ್ಕೆ ಎಮ್ಮೆಗಳು ಇದ್ದಂತೆ ಕಂಡರು ಪೋಲೀಸರು ಠಾಣೆಗೆ ಪರಿಶೀಲನೆ ಮಾಡಿದಾಗ ಬರೋಬ್ಬರಿ 26 ಗೋವುಗಳ ಅಮಾನುಷವಾಗಿ ತುಂಬಿರುವುದು ಕಂಡುಬಂದಿದೆ.

ಹಿಂಸಾತ್ಮಕವಾಗಿದ್ದ ಗೋವುಗಳ ರಾತ್ರೋರಾತ್ರಿ ಬಜರಂಗದಳ ಕಾರ್ಯಕರ್ತರು ನೇರವಿನೊಂದಿಗೆ ಕಂಟೈನರ್ ವಾಹನದೊಳಗಿದ್ದ ಹಸುಗಳು ಕೆಳಗೆ ಇಳಿಸಿ ಸೋಮವಾರ ಬೆಳಗ್ಗೆ ಇನ್ನೊಂದು ವಾಹನ ಮಾಡಿ ಅರಸೀಕೆರೆ ಗೋಶಾಲೆಗೆ ಬಿಡಲಾಗಿದೆ. ಸಕಲೇಶಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.