ಹಾಸನ, ಮಾರ್ಚ್ 26: ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಹಿಳಾ ಘಟಕದ ಅಧ್ಯಕ್ಷರಾಗಿ ಮಮತಾ ಪಾಟೀಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಅಶಾದೇವಿ, ಶೀಲಾವಿಶ್ವನಾಥ್ ಮತ್ತು ಎಂ.ಬಿ.ಗಿರಿಜಾಂಬಿಕೆ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಸ್. ಧನಲಕ್ಷ್ಮೀ, ಸಹಕಾರ್ಯದರ್ಶಿಗಳಾಗಿ ಶೋಭಾ ಚಂದ್ರಶೇಖರ್, ಹೆಚ್.ಎಂ. ಇಂದಿರಾ ಸತೀಶ್ ಮತ್ತು ನಾಗರತ್ನ ಯೋಗೀಶ್, ಖಜಾಂಚಿಯಾಗಿ ಶೈಲಾ ಮದನ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮೈತ್ರಿವಿನಯ್, ರತ್ನ ಸೋಮಶೇಖರ್, ಶುಭಾ ಲತೇಶ್, ಸರಸ್ವತಿ ಚಂದ್ರಶೇಖರ್, ಭಾಮಿನಿ ಹೇಮಂತ್, ವೀಣಾದೇವರಾಜ್, ಶ್ವೇತಾ ನಂದಕುಮಾರ್, ಅನುಸೂಯಾ, ಸುಶೀಲಾ ಪಾಲನೇತ್ರ, ಕಮಲಾ ಚಂದ್ರಶೇಖರ್, ಸವಿತಾ ಮತ್ತು ದಾಕ್ಷಾಯಿಣಿ ಅವರು ಆಯ್ಕೆಯಾಗಿದ್ದಾರೆ.
ನಗರದ ಬಸವೇಶ್ವರ ಕಲ್ಯಾಣ ಮಂದಿರದ ಬಸವೇಶ್ವರ ದೇವಾಲಯದಲ್ಲಿ ಹಾಸನ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನೆರವೇರಿತು.
ಈ ಸಂದರ್ಭದಲ್ಲಿ ಮಹಿಳಾ ಘಟಕದ ಮಾಜಿ ಅಧ್ಯಕ್ಷರಾದ ಶೋಭಾ ಮಹೇಶ್ ಮತ್ತು ಅನುಸೂಯಾ ಚನ್ನಬಸಯ್ಯ, ತಾಲೂಕು ಸಮಿತಿಯ ಉಪಾಧ್ಯಕ್ಷರಾದ ಹೆಚ್.ಪಿ. ಹೇಮೇಶ್ ಮತ್ತು ಲೀಲಾ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಹೆಚ್.ವಿ. ಹೇಮಂತ್, ಸಹಕಾರ್ಯದರ್ಶಿಗಳಾದ ಶೆಟ್ಟಿಹಳ್ಳಿ ಧರ್ಮ, ಕೆ.ಎನ್. ಚಾಂದಿನಿ ಭೂಷಣ್, ತಾಲೂಕು ನಿರ್ದೇಶಕರಾದ ಮಯೂರಿ ಲೋಕೇಶ್, ಕಿರಣ್ ಕುಮಾರ್ ಹೊಸಮನಿ, ಡಿ.ವಿ. ಮದನ್, ಹೆಚ್.ಕೆ. ದೀಲಿಪ್, ದರ್ಶನ್, ರಾಜಶೇಖರ್ ಮೂರ್ತಿ, ಸಾವಿತ್ರಿ ವಿಜಯಕುಮಾರ್, ಸುಜಾತಾ ರಾಜಶೇಖರ್ ಮತ್ತು ಲತಾ ಸಂಪತ್ ಉಪಸ್ಥಿತರಿದ್ದರು.
ರಾಜ್ಯ ಸಮಿತಿಯ ಸದಸ್ಯರಾದ ಶಿವಕುಮಾರ್, ರಾಜ್ಯ ಮಹಿಳಾ ಸಮಿತಿ ನಿರ್ದೇಶಕರಾದ ನಾಗರತ್ನ, ಜಿಲ್ಲಾ ಉಪಾಧ್ಯಕ್ಷರಾದ ಪುನೀತ್ ಪಟೇಲ್ ಮತ್ತು ಗೀತಾ ಪುಟ್ಟಸ್ವಾಮಿ, ಜಿಲ್ಲಾ ನಿರ್ದೇಶಕರಾದ ಶೋಭನ್ ಬಾಬು ಹಾಗೂ ತಾಲೂಕು ಮಹಿಳಾ ಘಟಕದ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.