ಪ್ರಿಯಕರನ ಜತೆ ಪತ್ನಿ ಪರಾರಿ: ನದಿಗೆ ಹಾರಿ ಪತಿ ಆತ್ಮಹತ್ಯೆ!

ಹಾಸನ,ಮಾರ್ಚ್ 8:ಪ್ರಿಯಕರನ ಜತೆ ಪತ್ನಿ ಪರಾರಿಯಾದ್ದರಿಂದ ಆಘಾತಗೊಂಡ ಪತಿ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹೊಳೆನರಸೀಪುರ ತಾಲ್ಲೂಕಿನ ಮಾಕವಳ್ಳಿ ಬಳಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ: ರವಿ (38), ಅರಕಲಗೂಡು ತಾಲ್ಲೂಕಿನ ಹೊನ್ನವಳ್ಳಿ ಗ್ರಾಮದ ನಿವಾಸಿ.

ಮೃತ ರವಿ

ಘಟನೆ ವಿವರ:
ಕೆಲ ದಿನಗಳ ಹಿಂದೆ ರವಿ ಪತ್ನಿ ಲಾವಣ್ಯ ತನ್ನ ಮಗುವಿನೊಂದಿಗೆ ಹೊನ್ನವಳ್ಳಿ ಗ್ರಾಮದ ಪ್ರದೀಪ್ ಎಂಬುವವನ ಜತೆ ಪರಾರಿಯಾಗಿದ್ದರು. ಈ ಘಟನೆಗೆ ತೀವ್ರ ಆಘಾತಕ್ಕೊಳಗಾದ ರವಿ, ತಕ್ಷಣವೇ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ, ಎಸ್ಪಿಗೆ ದೂರು ಸಲ್ಲಿಸಿದ್ದರು.

ಪ್ರಿಯಕರ ಪ್ರದೀಪ್

ಆದರೂ ಕೂಡ ತನಿಖೆ ಯಾವುದೇ ಪ್ರಗತಿ ಕಾಣದೆ, ತನ್ನ ಪತ್ನಿಯ ಸುಳಿವು ಸಿಗದೆ ಮನನೊಂದ ಅತ, ಮಾಕವಳ್ಳಿ ಬಳಿಯ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪೊಲೀಸರು ಶವಕ್ಕಾಗಿ ಶೋಧ ಕಾರ್ಯಾಚರಣೆ:
ಘಟನಾ ಸ್ಥಳಕ್ಕೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರವಿ ಶವವನ್ನು ಹುಡುಕಲು ಶೋಧ ಕಾರ್ಯ ಆರಂಭಿಸಲಾಗಿದೆ.