ಪ್ರಜ್ವಲ್ ರೇವಣ್ಣ ಅರ್ಜಿ ಹಾಕುವುದಕ್ಕೇ ಬಾರದ ಎಳಸು: ಎಂ.ಎ.ಗೋಪಾಲಸ್ವಾಮಿ ವಾಗ್ದಾಳಿ

ನಾವೂ ಅವರಂತೆಯೇ ಕಾರ್ಯಕ್ರಮ ಮಾಡಿದ್ದೇವೆ ಅಷ್ಟೇ

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅರ್ಜಿ ಹಾಕುವುದಕ್ಕೇ ಬಾರದ ಎಳಸು, ಅದೇನು ಓದಿಕೊಂಡು‌ ಬಂದಿದ್ದಾನೋ ಗೊತ್ತಿಲ್ಲ, ಅಂತಹವರ ಆರೋಪಕ್ಕೆ ಪ್ರತಿಕ್ರಿಯಿಸಬೇಕಾದ ಅಗತ್ಯ ಇಲ್ಲ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದ ಫಲಾನುಭವಿಗಳ ಸಮಾವೇಶಕ್ಕೆ ಬರಲು ಜನರಿಗೆ ಒದಗಿಸಿದ್ದ ಬಸ್ ಸೌಕರ್ಯ, ವೇದಿಕೆ, ಟೆಂಟ್ ಗಳಿಗೆ ಸರ್ಕಾರದಿಂದ ಹಣ ನೀಡಲಾಗಿದೆ. ಊಟದಂತಹ ವ್ಯವಸ್ಥೆಗೆ ಪಕ್ಷದ ಕಾರ್ಯಕರ್ತರು ವೆಚ್ಚ ಮಾಡಿದ್ದೇವೆ ಯಾರಿಂದಲೂ ವಸೂಲಿ ಮಾಡಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.

ಕಳೆದ ಲೋಕಸಭೆ ಚುನಾವಣೆ ವೇಳೆ ಸಂಸದ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆಗೂ ಮುನ್ನ ನಡೆದಿದ್ದ ಸಾರ್ವಜನಿಕ ಸಭೆಯನ್ನು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಗೆ ನಡೆಸಿದ್ದರೋ ನಾವೂ ಹಾಗೇ ನಡೆಸಿದ್ದೇವೆ. ಆಗ ಅವರು ವಸೂಲಿ ಮಾಡಿದ್ದರೆ ನಾವೂ ಹಾಗೇ ಮಾಡಿದ್ದೇವೆ ಎಂದುಕೊಳ್ಳಲಿ ಎಂದರು.