ಬೆಂಗಳೂರು ದಾಸನಪುರ ಗ್ರಾಪಂ ಕಾರ್ಯದರ್ಶಿಯ ವಾಟಿಹಳ್ಳಿ ಐಷಾರಾಮಿ ಮನೆ ಮೇಲೆ‌ ಲೋಕಾಯುಕ್ತ ದಾಳಿ

ಹಾಸನ: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದಾರೆ.

ದಾಳಿ ನಡೆದ ಬೆಂಗಳೂರಿನ ನಿವಾಸ

ಬೆಂಗಳೂರು ಉತ್ತರ,‌ ದಾಸನಪುರ ಗ್ರಾಮ ಪಂಚಾಯತಿಯಲ್ಲಿ ಗ್ರೇಡ್-1 ಕಾರ್ಯದರ್ಶಿ ಆಗಿರುವ ಎನ್.ಎಂ.ಜಗದೀಶ್ ಅವರ ಬೆಂಗಳೂರಿನ ನಿವಾಸ, ಪೀಣ್ಯಾದ ಹೆಸರುಘಟ್ಟದಲ್ಲಿರುವ ಅಪಾರ್ಟ್ಮೆಂಟ್, ದಾಸನಪುರ ಗ್ರಾಮ ಪಂಚಾಯತಿ ಹಾಗೂ ಬೇಲೂರು ತಾಲ್ಲೂಕಿನ, ವಾಟಿಹಳ್ಳಿ ಗ್ರಾಮದ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎನ್.ಎಂ.ಜಗದೀಶ್ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ನಂದಗೊಂಡನಹಳ್ಳಿ ಗ್ರಾಮದವರಾಗಿದ್ದು ಸಮೀಪದ ವಾಟಿಹಳ್ಳಿ ಬಳಿ ಜಮೀನು ಹಾಗೂ ನಿವೇಶನ ಹೊಂದಿದ್ದಾರೆ. ಲೋಕಾಯುಕ್ತ ಎಸ್‌ಪಿ ಮಲ್ಲಿಕ್ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ತಿರುಮಲಮೇಶ್, ಲೋಕಾಯುಕ್ತ ಇನ್ಸ್‌ಪೆಕ್ಟರ್‌ಗಳಾದ ಬಾಲು, ಶಿಲ್ಪಾ ಹಾಗೂ ಚಿಕ್ಕಮಗಳೂರಿನ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆದಿದ್ದು ಮುಂಜಾನೆಯಿಂದಲೂ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.