ಪೌರ ಕಾರ್ಮಿಕರಿಗೆ ಸಮಾಜ ಋಣಿಯಾಗಿರಬೇಕು; ಸಂಸದ ಶ್ರೇಯಸ್ ಪಟೇಲ್

ಹೊಳೆನರಸೀಪುರದಲ್ಲಿ ಪೌರ ಕಾರ್ಮಿಕರ ದಿನಾಚರಣೆ| ಪೌರ ಕಾರ್ಮಿಕರೊಂದಿಗೆ ಹೆಜ್ಜೆ ಹಾಕಿದ ಲೋಕಸಭಾ ಸದಸ್ಯ

ಹೊಳೆನರಸೀಪುರ; ಪೌರಕಾರ್ಮಿಕರ ಅವಿರತ ಶ್ರಮಕ್ಕೆ ಸಮಸ್ತ ನಾಗರಿಕರು ಸದಾ ಋಣಿಯಾಗಿರಬೇಕು ಎಂದು ಲೋಕಸಭಾ ಸದಸ್ಯರಾದ ಶ್ರೇಯಸ್ ಎಂ ಪಟೇಲ್ ತಿಳಿಸಿದರು.

ಅವರು ಪಟ್ಟಣದಲ್ಲಿ ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಪುರಸಭೆ ವತಿಯಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಪೌರಕಾರ್ಮಿಕರ ಶ್ರಮವನ್ನು ಮುಕ್ತ ಕಂಠದಿಂದ ಪ್ರಶಂಶಿಸಿದರು. ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ಇರಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು. ಮೆರವಣಿಗೆ ವೇಳೆ ಪೌರಕಾರ್ಮಿಕರೊಂದಿಗೆ ಶ್ರೇಯಸ್ ಎಂ ಪಟೇಲ್ ಅವರು ನೃತ್ಯದಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಪುರಸಭಾಧ್ಯಕ್ಷ ಕೆ ಶ್ರೀಧರ್, ಪುರಸಭೆ ಮುಖ್ಯ ಅಧಿಕಾರಿ ನಾಗೇಂದ್ರ ಕುಮಾರ್, ಸೇರಿದಂತೆ ಪುರಸಭೆಯ ನೌಕರರು ಸಿಬ್ಬಂದಿ ವರ್ಗದವರು ಹಾಗೂ ಪೌರಕಾರ್ಮಿಕರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.