ಬೇಲೂರು ಚನ್ನಕೇಶವಸ್ವಾಮಿ ರಥೋತ್ಸವದಲ್ಲಿ ಕುರಾನ್ ಪಠಣ ಬೇಡ: ಹಿಂದುಪರ ಸಂಘಟನೆಗಳ ಆಗ್ರಹ

ಹಾಸನ: ಏ.20ರ‌ಂದು ನಡೆಯಲಿರುವ ಬೇಲೂರಿನ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ರಥೋತ್ಸವದ ವೇಳೆ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ಹಿಂದುಪರ ಸಂಘಟನೆಗಳ ಮುಖಂಡರು ತಕರಾರು ತೆಗೆದಿದ್ದಾರೆ.

ಹಿಂದೂ ತಾಸಿಲ್ದಾರ್ ಕಚೇರಿಗೆ ತೆರಳಿದ ಹಿಂದೂ ಸಂಘಟನೆಗಳ ಮುಖಂಡರು ರಥೋತ್ಸವಕ್ಕೂ ಮುನ್ನ ಕುರಾನ್ ಪಟ್ಟಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು

ಮೇದೂರಿನ ಖಾಜಿ ಕುಟುಂಬದವರು ರಥೋತ್ಸವಕ್ಕೆ ಮುನ್ನ ಕುರಾನ್ ಪಠಿಸುವ ಪರಿಪಾಠ ಹಿಂದಿನಿಂದ ನಡೆದು ಬಂದಿದೆ. ಆದರೆ ಈ ಬಾರಿ ಇದಕ್ಕೆ ಅವಕಾಶ ನೀಡದಂತೆ ವಿವಿಧ ಹಿಂದುಪರ ಸಂಘಟನೆಗಳು ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿವೆ.

ಹಿಂದು ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ಬೇಲೂರಿನ ಚನ್ನಕೇಶವ ದೇವಾಲಯದ ಮ್ಯಾನ್ಯುಯಲ್‌ನಲ್ಲಿ ಕುರಾನ್ ಪಠಣಕ್ಕೆ ಸಂಬಂಧಿಸಿದ ಯಾವುದೇ ಉಲ್ಲೇಖವಿಲ್ಲ.

ಈ ಹಿನ್ನೆಲೆಯಲ್ಲಿ, ರಥೋತ್ಸವದ ಸಂದರ್ಭದಲ್ಲಿ ಕುರಾನ್ ಪಠಿಸುವುದು ಕಾನೂನುಬಾಹಿರವಾಗಿದೆ ಎಂದು ವಾದಿಸಿರುವ ಅವರು, ಏಪ್ರಿಲ್ 10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇಂತಹ ಯಾವುದೇ ಚಟುವಟಿಕೆಗೆ ಅನುಮತಿ ನೀಡದಂತೆ ಆಡಳಿತವನ್ನು ಒತ್ತಾಯಿಸಿದ್ದಾರೆ.

“ಚನ್ನಕೇಶವಸ್ವಾಮಿ ಜಾತ್ರೆಯು ಹಿಂದು ಧಾರ್ಮಿಕ ಸಂಪ್ರದಾಯಗಳಿಗೆ ಸೀಮಿತವಾಗಿದ್ದು, ಇದರಲ್ಲಿ ಬೇರೆ ಧರ್ಮದ ಆಚರಣೆಗಳಿಗೆ ಸ್ಥಾನವಿಲ್ಲ” ಎಂದು ಹಿಂದು ಮುಖಂಡ ರಘು ಹೇಳಿದರು.