ಹಾಸನ : ಜೆಡಿಎಸ್, ಬಿಜೆಪಿಯವರು ಟಿಕೆಟ್ ಕೊಟ್ಟಿಲ್ಲ ಎಂದು ಸಿಂಪಥಿ ಕ್ರಿಯೆಟ್ ಮಾಡಿಕೊಳ್ಳುವುದಕ್ಕೋಸ್ಕರ ಸಿ.ಪಿ.ಯೋಗೇಶ್ವರ್ ನಾಟಕ ಆಡಿದರು. ಈಗ ಮೂರು ತಿಂಗಳ ಹಿಂದೆಯೇ ನಿರ್ಧಾರವಾದಂತೆ ಕಾಂಗ್ರೆಸ್ ಸೇರಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಹಾಸನಾಂಬೆ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರು ಪ್ರತಿ ಚುನಾವಣೆಗೂ ಪಕ್ಷಾಂತರ ಮಾಡಿದ್ದಾರೆ. ಈವರೆಗೆ ಏಳು ಬಾರಿ ಪಕ್ಷ ಬದಲಿಸಿದ್ದಾರೆ.
ಯಾವ ಪಾರ್ಟಿ ಆಡಳಿತದಲ್ಲಿ ಇರುತ್ತೋ ಅದಕ್ಕೆ ಹೋಗ್ತಾರೆ. ಹಿಂದೆ ಬಿಜೆಪಿ ರೂಲಿಂಗ್‌ನಲ್ಲಿ ಇತ್ತು ಅಲ್ಲಿಗೆ ಬಂದಿದ್ದರು. ಅದಕ್ಕೂ ಹಿಂದೆ ಕಾಂಗ್ರೆಸ್ ರೂಲಿಂಗ್‌ನಲ್ಲಿ ಇತ್ತು ಅಲ್ಲಿಗೆ ಹೋಗಿದ್ರು. ಈಗ ಕಾಂಗ್ರೆಸ್ ಬಂದಿದೆ ಅಲ್ಲಿಗೇ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅವರು ಪ್ರತಿ ಚುನಾವಣೆಗೂ ಒಂದೊಂದು ಪಾರ್ಟಿ, ಸಿಂಬಲ್‌ನ್ನ ಆಯ್ಕೆ ಮಾಡ್ತಾರೆ. ಆದರೆ ಶಾಶ್ವತ ಕೆಲಸ ಮಾಡುವವರನ್ನು ಜನ ಆಯ್ಕೆ ಮಾಡ್ತಾರೆ. ಅಲ್ಲಿನ ನೀರಾವರಿ ಯೋಜನೆಗೆ ಸುಮಾರು 150 ಕೋಟಿ ರೂ. ಬಿಜೆಪಿ ಸರ್ಕಾರ ಕೊಟ್ಟಿದೆ.
ಅದನ್ನು ನೆನಪಿಟ್ಟುಕೊಂಡು ಬಿಜೆಪಿಗೆ, ನರೇಂದ್ರಮೋದಿಗೆ, ದೇವೇಗೌಡರ ಪರವಾಗಿ ನಿಂತಿರುವ ನಿಖಿಲ್ ಕುಮಾರಸ್ವಾಮಿಗೆ ಓಟು ಮಾಡ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಯೋಗೇಶ್ವರ್‌ಗೆ ಟಿಕೆಟ್ ಕೊಡಿಸಲು ನಾನು ಸೀರಿಯಸ್ ಆಗಿ ಟ್ರೈ ಮಾಡಿದ್ದೆ. ನಮ್ಮ ಎಲ್ಲಾ ಲೀಡರ್‌ಗಳು ಟ್ರೈ ಮಾಡಿದ್ರು, ಅವರು ದೆಹಲಿಗೆ ಹೋಗಿದ್ರು. ಟಿಕೆಟ್ ಕೊಡ್ತಿವಿ ಅಂದರೂ ಬೇಡ ಎಂದು ಹೊರಟು ಹೋದರು. ಪ್ರಾರಂಭದಲ್ಲಿ ಕೇಳ್ದಂಗೆ ನಾಟಕವಾಡಿ ಹೋದರು. ಮೂರು ತಿಂಗಳ ಹಿಂದನೇ ಇವೆಲ್ಲಾ ಪ್ಲಾನ್ ಮಾಡಿದ್ರು ಎಂದು ಆರೋಪಿಸಿದರು.
ಮೂರು ತಿಂಗಳ ಹಿಂದೆ ಡಿ.ಕೆ.ಶಿವಕುಮಾರ್ ಜೊತೆ ಮಾತನಾಡಿದ್ರು. ಪದೇ, ಪದೆ ಡಿ.ಕೆ.ಸುರೇಶ್ ಅವರು ಸಪ್ರೈಸ್ ಅಭ್ಯರ್ಥಿ ನಿಲ್ಲುಸ್ತಿವಿ ಅಂತಿದ್ದರು, ಇದೇ ಆ ಸಪ್ರೈಸ್. ಅವರ ಜೊತೆ ಮಾತನಾಡಲಿಲ್ಲ ಎಂದರೆ ಈ ಡೈಲಾಗ್ ಏಕೆ ಹೊಡಿತಿದ್ರು? ಎಂದು ಪ್ರಶ್ನಿಸಿದರು.
ಡಿ.ಕೆ.ಸುರೇಶ್ ಅವರು ನಿಲ್ಲಬೇಕಿತ್ತು, ನಿಲ್ಲಲಿಲ್ಲ. ಮುಂಚೆನೇ ಪ್ಲಾನ್ ಮಾಡಿಕೊಂಡಿದ್ರು. ಜೆಡಿಎಸ್, ಬಿಜೆಪಿಯವರು ಟಿಕೆಟ್ ಕೊಟ್ಟಿಲ್ಲ ಎಂದು ಸಿಂಪಥಿ ಕ್ರಿಯೆಟ್ ಮಾಡಿಕೊಳ್ಳುವುದಕ್ಕೋಸ್ಕರ ಈ ನಾಟಕವನ್ನ ಆಡಿದ್ದಾರೆ. ಅವರಿಗೆ ಜನ ಬುದ್ದಿ ಕಲಿಸುತ್ತಾರೆ ಎಂದರು.
ಕರ್ನಾಟಕದಲ್ಲಿರುವ ಜನ ಈ ಭ್ರಷ್ಟ ಸರ್ಕಾರ, ಲೂಟಿಕೋರರ ಸರ್ಕಾರಕ್ಕೆ ಬುದ್ದಿ ಕಲಿಸುತ್ತಾರೆ ಎನ್ನುವ ವಿಶ್ವಾಸ ಇದೆ. ನಿಖಿಲ್ ಅವರು ಎರಡು ಬಾರಿ ಸೋತಿದ್ದಾರೆ. ಅವರಿಗೆ ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರ ತೆಗೆದುಹಾಕಿ ಅರ್ಜುನನ ಪಾತ್ರವನ್ನು ಕೊಟ್ಟಿದ್ದೀವಿ. ಮೂರನೇ ಬಾರಿ ಚಕ್ರವ್ಯೂಹವನ್ನು ಬೇಧಿಸುತ್ತಾರೆ. ಅರ್ಜುನನ ರೀತಿ ಹೋರಾಟ ಮಾಡ್ತಾರೆ ಅನ್ನುವ ವಿಶ್ವಾಸವಿದೆ.
ಅರ್ಜುನ ಇದನ್ನೆಲ್ಲಾ ಭೇದಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ. ಬಿಜೆಪಿ ಎಲ್ಲಾ ನಾಯಕರು ಪೂರ್ತಿ ಪ್ರಚಾರಕ್ಕೆ ಹೋಗ್ತಾರೆ. ಯಡಿಯೂರಪ್ಪ ಮೂರು ದಿನ ಟೈಂ ಕೊಟ್ಟಿದ್ದಾರೆ. ರಾಷ್ಟ್ರ ನಾಯಕರು ಬೈ ಎಲೆಕ್ಷನ್ ಆಗಿರುವುದರಿಂದ ಬರಲ್ಲ ಅನ್ಸುತ್ತೆ. ನಾನು, ಅಶ್ವಥ್ ನಾರಾಯಣ್, ಸದಾನಂದಗೌಡರು ನಾವೆಲ್ಲ ಒಕ್ಕಲಿಗ, ಲಿಂಗಾಯಿತ, ದಲಿತ, ಹಿಂದುಳಿದ ಸಮುದಾಯಗಳ ನಾಯಕರು ಹೋಗ್ತಾ ಇದ್ದೀವಿ.
ನಮ್ಮ ಎಲೆಕ್ಷನ್ ಯಾವ ರೀತಿ ಫೇಸ್ ಮಾಡಿದ್ವಿ ಆ ರೀತಿ ಫೇಸ್ ಮಾಡ್ತಿವಿ. ಹಂಡ್ರೆಡ್ ಪರ್ಸೆಂಟ್ ಪ್ರತಿಷ್ಠೆಯಾಗಿರುತ್ತೆ. ಮೂರು ಕ್ಷೇತ್ರಗಳ ಚುನಾವಣೆಯಲ್ಲಿ ಚನ್ನಪಟ್ಟಣ ಹೈವೋಲ್ಟೇಜ್ ಕ್ಷೇತ್ರ ನಮ್ಮ ಪೂರ್ತಿ ಏನ್ ಶಕ್ತಿ ಅಲ್ಲಿಯೇ ಹಾಕುತ್ತೇವೆ ಎಂದರು.
Leader of Opposition R. Ashok lashed out that CP Yogeshwar played this drama to create sympathy that BJP and JDS did not give tickets and joined Congress as decided three months ago.