ಕುಡಿದು ಚರಂಡಿಗೆ ಬಿದ್ದವನ ಜೀವಕ್ಕೆ ಮುಳುವಾದ ಕೊಳಚೆ ನೀರು!

ಹಾಸನ: ಮದ್ಯದ ಅಮಲಿನಲ್ಲಿ ಚರಂಡಿಗೆ ಬಿದ್ದ ವ್ಯಕ್ತಿಯೊಬ್ಬ ಕೊಳಚೆ ನೀರಿನಲ್ಲಿ ಮುಳುಗಿ ಉಸಿರುಗಟ್ಟೆ ಸಾವಿಗೀಡಾದ ಘಟನೆ ಬೇಲೂರು ತಾಲ್ಲೂಕಿನ, ಬಿಕ್ಕೋಡು ಗ್ರಾಮದಲ್ಲಿ‌ ನಿನ್ನೆ ರಾತ್ರಿ ನಡೆದಿದೆ.

ಓಂಕಾರ (40) ಸಾವನ್ನಪ್ಪಿದ ವ್ಯಕ್ತಿ. ಮದ್ಯ ಸೇವಿಸಿ ಮನೆಗೆ ತೆರಳುವಾಗ ಆಯತಪ್ಪಿ ಚರಂಡಿಯೊಳಗ ಮಕಾಡೆ ಬಿದ್ದಿದ್ದ ಓಂಕಾರಗೆ ಅಲ್ಲಿಂದ ಮೇಲೇಳಲು ಸಾಧ್ಯವಾಗಿಲ್ಲ.

ಸ್ವಚ್ಛತೆ ಇಲ್ಲದೆ ಕಸ ಕಟ್ಟಿಕೊಂಡು ನೀರು ಹರಿಯದೇ ಸಂಪೂರ್ಣ ಕೊಳಚೆ ನೀರಿನಿಂದ ತುಂಬಿದ್ದ ಚರಂಡಿಯಲ್ಲಿ ಉಸಿರುಗಟ್ಟಿ ಆತ ಮೃತಪಟ್ಟಿದ್ದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.

ಚರಂಡಿ ಸ್ವಚ್ಛ ಮಾಡದ ಗ್ರಾ.ಪಂ‌. ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.