ಮೈಸೂರು: ಎಚ್.ಡಿ. ರೇವಣ್ಣ ವಿರುದ್ಧದ ಕಿಡ್ನಾಪ್ ಪ್ರಕರಣದಲ್ಲಿ ಕೆ.ಆರ್ ನಗರ ಶಾಸಕನ ಕೈವಾಡವಿದೆ ಎಂದು ಆರೋಪಿಸಿದ್ದ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಗೆ ಕೆ.ಆರ್ ನಗರ ಕಾಂಗ್ರೆಸ್ ಶಾಸಕ ಡಿ.ರವಿಶಂಕರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಡಿ.ರವಿಶಂಕರ್, ನನ್ನ ವಿರುದ್ದ ಆರೋಪಿಸಿದವರ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ . ನನಗೂ ಕಿಡ್ನಾಪ್ ಪ್ರಕರಣಕ್ಕೂ ಯಾವ ಸಂಬಂಧವಿಲ್ಲ. ನಾನು ಆ ದಿನ ಕೆ.ಆರ್ ನಗರದಲ್ಲೇ ಇರಲಿಲ್ಲ. ಆದರೂ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿ ಅಪಾದಿಸುತ್ತಿದ್ದಾರೆ.
ನನಗೆ ಸಂತ್ರಸ್ತೆ ಆಗಲಿ, ಅವರ ಮಗ ಆಗಲಿ ಸಂಪರ್ಕದಲ್ಲೇ ಇಲ್ಲ. ನಾನು ದೂರವಾಣಿ ಹಾಗೂ ನೇರವಾಗಿ ಎಂದೂ ಭೇಟಿಯಾಗಿಲ್ಲ. ಅಪಪ್ರಚಾರ ಮಾಡುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.