ಹಾಸನ: ತಮ್ಮ ವಿರುದ್ಧ ಹರಿಹಾಯ್ದಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ವಿರುದ್ಧ ಕೆ.ಎಂ.ಶಿವಲಿಂಗೇಗೌಡ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.
ಅರಸೀಕೆರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿನ ಭಾಷಣಲ್ಲಿ ಗೌಡರ ವಿರುದ್ಧ ಮೈ ಚಳಿ ಬಿಟ್ಟು ವಾಗ್ದಾಳಿ ನಡೆಸಿದರು.
ನೀವು ಏನ್ರೀ ಹೇಳಿದ್ರಿ? ನನ್ನ ಜೀವಮಾನದಲ್ಲಿ ಪಕ್ಷದ ಜೊತೆ ಹೋಗಲ್ಲ ಎಂದಿದ್ದೀರಿ. ನಿಮ್ಮ ಅನೈತಿಕವಾದ ಮೈತ್ರಿಯನ್ನು ಜನ ತಿರಸ್ಕಾರ ಮಾಡ್ತಾರೆ.
ಕರ್ನಾಟಕ ರಾಜ್ಯದ ಜನ ಯಾವುದೇ ಕಾರಣಕ್ಕೂ ಇದನ್ನು ಒಪ್ಪಲ್ಲ. ಜೂ.4 ರಂದು ಫಲಿತಾಂಶದ ದಿನ ಗೊತ್ತಾಗುತ್ತೆ. ನಿಮಗೂ ನಮಗೂ ಸಂಬಂಧ ಸರಿ ಬರಲಿಲ್ಲ. ನೀವು ಅರಸೀಕೆರೆಗೆ ಬಂದು ಎದೆ ಬಡೆದುಕೊಂಡ್ರಿ, ಆದರೆ ಅರಸೀಕೆರೆ ಜನ ನನ್ನನ್ನು ಗೆಲ್ಲಿಸಿದ್ದಾರೆ.
ನಿಮ್ಮ ರಾಜಕಾರಣದಿಂದ ಜಿಲ್ಲೆಯ ಜನ ನೊಂದಿದ್ದಾರೆ. ನಿಮ್ಮ ಅರವತ್ತು ವರ್ಷದ ರಾಜಕೀಯದಲ್ಲಿ ಅರಸೀಕೆರೆಗೆ ನೀರು ಕೊಟ್ಟಿದ್ದೀರೇನ್ರಿ? ಅರಸೀಕೆರೆಯ ಹಳ್ಳಿಗಳಿಗೆ, ನಗರಕ್ಕೆ ಕುಡಿಯುವ ನೀರು ಕೊಟ್ಟಿದ್ದು ಸಿದ್ದರಾಮಯ್ಯ, ಅದಕ್ಕೋಸ್ಕರ ನಾನು ಕಾಂಗ್ರೆಸ್‌ಗೆ ಹೋಗಿದ್ದೇನೆ.
ನೀವ್ಯಾರು ಹೆದರುವ ಅವಶ್ಯಕತೆ ಇಲ್ಲ, ನಾವು ನಿಮ್ಮ ಜತೆ ಇರ್ತೇವೆ. ಇವರಿಗೆ ಊಟ ಹಾಕಬೇಡಿ, ಶ್ರೇಯಸ್‌ಪಟೇಲ್ ತಬ್ಬಲಿ ಇದ್ದಾನೆ, ಅವನಿಗೂ ಊಟ ಹಾಕಿ ಎಂದು ಮನವಿ ಮಾಡಿದರು.