ಪ್ರಜ್ವಲ್ ರೇವಣ್ಣ, ಭವಾನಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೀದಿಗಿಳಿದ ಎ.ಟಿ.ರಾಮಸ್ವಾಮಿ; ಹಾಸನದಲ್ಲಿ ಮಹಿಳೆಯರ ಬೃಹತ್ ಪ್ರತಿಭಟನೆ

ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಪತ್ನಿ ಮೇಲೆ ಹಲ್ಲೆ ಮಾಡಿ ಗರ್ಭಪಾತಕ್ಕೆ ಕಾರಣವಾದ ಆರೋಪ; ಬೆದರಿಕೆ ಹಾಕಿ ಆಸ್ತಿ ಮಾರಾಟ ಮಾಡಿದಿದ ಬಗ್ಗೆ ದೂರು ನೀಡಿದರೂ ಕ್ರಮ‌ ಜರುಗಿಸದ ಪೊಲೀಸರ ವಿರುದ್ಧ ಆಕ್ರೋಶ

ಹಾಸನ: ಸಂಸದ‌ ಪ್ರಜ್ವಲ್ ರೇವಣ್ಣ ಮಾಜಿ‌ ಕಾರು ಚಾಲಕ ಕಾರ್ತಿಕ್ ಪತ್ನಿ ಮೇಲಿನ ಹಲ್ಲೆ ಹಾಗೂ ಗರ್ಭಪಾತ ಆರೋಪ ಪ್ರಕರಣ ಈಗ ಗಂಭೀರ ಸ್ವರೂಪ ಪಡೆಯುತ್ತಿದ್ದು, ನಗರದ ಎನ್.ಆರ್.ವೃತ್ತದಲ್ಲಿ ನೂರಾರು ಮಹಿಳೆಯರ ಜತೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಭವಾನಿರೇವಣ್ಣ ಹಲ್ಲೆಯಿಂದ ಕಾರ್ತಿಕ್ ಪತ್ನಿಗೆ ಗರ್ಭಪಾತ ಆಗಿದೆ. ಆದರೆ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಮಾನವ ಸರಪಳಿ ನಿರ್ಮಿಸಿ, ವಾಹನ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ತಮ್ಮ ಕಾರು ಚಾಲಕ ಕಾರ್ತಿಕ್‌ಗೆ ಸೇರಿದ 13 ಎಕರೆ ಭೂಮಿಯನ್ನು ಒತ್ತಾಯ ಪೂರ್ವಕವಾಗಿ ಮಾರಾಟ ಮಾಡಿಸಿರುವ ಆರೋಪ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿ ಬಂದಿದ್ದು, ತಮ್ಮ ಬೇನಾಮಿ‌ ಗುತ್ತಿಗೆದಾರೊಬ್ಬರಿಗೆ ಭೂಮಿ ಕ್ರಯಮಾಡಿ ಎಂದು ಕಾರ್ತಿಕ್ ಹಾಗೂ ಪತ್ನಿ ಶಿಲ್ಪಾ ಮೇಲೆ ಹಲ್ಲೆ ಹಾಗು ದೌರ್ಜನ್ಯ ನಡೆಸಿರುವ ಆರೋಪ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಕೆಯಾಗಿದೆ.

ಗರ್ಭಪಾತಕ್ಕೆ ಕಾರಣವಾದವರ ವಿರುದ್ದ ಕ್ತಮ ಕೈಗೊಳ್ಳಿ ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಎನ್.ಆರ್‌.ವೃತ್ತದಿಂದ ಡಿಸಿ ಕಛೇರಿವರೆಗೆ ಮೆರವಣಿಗೆ ನಡೆಸಲಾಯಿತು.