ಹಿರಿಯ ಪತ್ರಕರ್ತ ಸಾಲಗಾಮೆ ಸತ್ಯನಾರಾಯಣ ಇನ್ನಿಲ್ಲ

ಹಾಸನ: ಹಿರಿಯ ಪತ್ರಕರ್ತ ಸಾಲಗಾಮೆ ಸತ್ಯನಾರಾಯಣ (ಸತ್ಯಣ್ಣ) (83 ) ಬುಧವಾರ ಸಂಜೆ ಸಾಲಗಾಮೆಯ   ಸ್ವಗೃಹದಲ್ಲಿ ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ 12 ಗಂಟೆಗೆ ಸಾಲಗಾಮೆಯಲ್ಲಿ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸಾಲಗಾಮೆ ಸತ್ಯಣ್ಣ ಎಂದೇ ಖ್ಯಾತರಾಗಿದ್ದ ಅವರು ಹೋಬಳಿ ಕೇಂದ್ರ ಸಾಲಗಾಮೆಯಿಂದ ಹಲವು ಪತ್ರಿಕೆಗಳಿಗೆ ವರದಿ ಮಾಡುತ್ತಿದ್ದರು. ಪತ್ರಿಕೆಗಳ ಏಜೆಂಟ್‌ ಆಗಿ ಗ್ರಾಮಾಂತರ ಪ್ರದೇಶಕ್ಕೆ ಮುಂಜಾನೆಯೇ ಪತ್ರಿಕೆ ತಲುಪಿಸುವ ಜವಾಬ್ದಾರಿಯನ್ನು ದಶಕಗಳ ಕಾಲ ನಿರ್ವಹಿಸಿದ್ದರು.