ಔತಣಕೂಟದ ನೆಪದಲ್ಲಿ ಎಚ್.ಡಿ.ಕುಮಾರಸ್ವಾಮಿ ಜತೆ ಎ.ಮಂಜು ರಹಸ್ಯ ಚರ್ಚೆ; ಹೆಚ್ಚಿದ ಕುತೂಹಲ

ಹಾಸನ: ಜೆಡಿಎಸ್ ಶಾಸಕ ಎ.ಮಂಜು ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಔತಣಕೂಟ ಏರ್ಪಡಿಸಿದ್ದು, ಅವರ ಈ ವಿಶೇಷ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.

ಪ್ರಜ್ವಲ್‌ರೇವಣ್ಣ ಸ್ಪರ್ಧೆಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಎ.ಮಂಜು, ಹಾಸನ ಕ್ಷೇತ್ರದಿಂದ ದೇವೇಗೌಡರ ಕೊನೆಯ ಚುನಾವಣೆ ಅವರೇ ಸ್ಪರ್ಧಿಸಲಿ ಎಂದು ಹೇಳಿಕೆ ನೀಡಿದ್ದರು. ಅಲ್ಲದೇ ಜೆಡಿಎಸ್ ಸಾಧನೆಗಳ ಹೊತ್ತಿಗೆ ಬಿಡುಗಡೆ ಸಮಾರಂಭಕ್ಕೂ ಗೈರಾಗಿದ್ದರು.

ನಂತರ ಭವಾನಿ ರೇವಣ್ಣ, ಪ್ರಜ್ವಲ್ ಜತೆಗೆ ಅರಕಲಗೂಡಿನಲ್ಲಿ ಎ.ಮಂಜು ಅವರನ್ನು ಭೇಟಿಯಾದಾಗಲೂ ಅವರು ಸಂಸದರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ ಹಾಸನದಲ್ಲಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಜೆಡಿಎಸ್ ಪರ ಪ್ರಚಾರ ನಡೆಸುವ ಭರವಸೆ ನೀಡಿದ್ದರು.

ಅವರು ಈಗ ಎಚ್.ಡಿ.ಕೆ. ಜತೆ ಔತಣಕೂಟದ ನೆಪದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿರುವುದು ಕೂತುಹಲ ಮೂಡಿಸಿದೆ.