ಹೋಮಕ್ಕೆ ಆಹ್ವಾನಿಸದ ಡಿಸಿ ಮೇಲೆ ಹರಿಹಾಯ್ದ ಶಾಸಕ ಸ್ವರೂಪ್!

ಹಾಸನಾಂಬ ಉತ್ಸವದಲ್ಲಿ ಸ್ಥಳೀಯ ಶಾಸಕರ ಕಡೆಗಣೆನೆ ಆರೋಪ: ದೇವಾಲಯದ ಆವರಣದಲ್ಲೆ ಶಾಸಕ ಸ್ವರೂಪ್ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ

ಹಾಸನ: ಹಾಸನಾಂಬ ಉತ್ಸವದ ಮೊದಲ ದಿನದಿಂದಲೂ ದೇವಾಲಯದ ಆವರಣದಲ್ಲಿ ಪ್ರತಿಭಟನಾ ಕಾವು ಹೆಚ್ಚಾಗುತ್ತಿದ್ದು ದೇವಾಲಯದ ಬಾಗಿಲು ತೆರೆಯುವ ಮೊದಲ ದಿನವೇ ದೇವಾಲಯದ ಒಳ ಪ್ರವೇಶ ವಿಚಾರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರೆ ಉತ್ಸವದ ಮೂರನೇ ದಿನವಾದ ಇಂದು ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು

ಹಾಸನಂಬ ಉತ್ಸವದಲ್ಲಿ ಜಿಲ್ಲಾಡಳಿತ ಸ್ಥಳೀಯ ಶಾಸಕರನ್ನು ಕಡೆಗಣಿಸಿದೆ ಎಂದು ಆರೋಪಿಸಿ ಹಾಸನಾಂಬ ದೇವಾಲಯದ ಎದುರೇ ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರು ಪ್ರತಿಭಟನೆ ನಡೆಸಿದರು

ಇಂದು ಬೆಳ್ಳಂಬೆಳಿಗ್ಗೆ ದೇವಾಲಯದ ಆವರಣಕ್ಕೆ ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ ನಗರಸಭೆ ಸದಸ್ಯರು ಹಾಗೂ ಕಾರ್ಯಕರ್ತರು ಜಿಲ್ಲಾಡಳಿತದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು

ನಂತರ ಶಾಸಕ ಸ್ವರೂಪ್ ಸುದ್ದಿಗಾರರೊಂದಿಗೆ ಮಾತನಾಡಿ ದೇವಾಲಯದಲ್ಲಿ ಈ ವರೆಗೆ ನಡೆಯದ ಹೋಮ ಹವನ ಈ ಭಾರಿ ನಡೆದಿದೆ ಆದರೆ ಹೋಮಕ್ಕೆ ಜಿಲ್ಲಾಧಿಕಾರಿಗಳು ಪತಿ ಸಮೇತ ಹೋಮ ನಡೆಸಿದ್ದಾರೆ ತನ್ನನ್ನು ಆಹ್ವಾನಿಸಿಲ್ಲ ಎಂದು ದೂರಿದರು

ಅಲ್ಲದೆ ಯಾವುದೇ ಉತ್ಸವದ ಎಲ್ಲಾ ಹಂತದಲ್ಲಿ ಸ್ಥಳೀಯ ಶಾಸಕನಾಗುವ ತನ್ನನ್ನು ಸಂಪೂರ್ಣ ಕಡೆಗಣಿಸಲಾಗಿದೆ ಜಿಲ್ಲಾಧಿಕಾರಿ ಸಿ ಸತ್ಯಭಾಮ ಹಾಸನಾಂಬ ಉತ್ಸವದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು ಮನಬಂದಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು

ದೇವಾಲಯದಲ್ಲಿ ಇದೆ ಮೊದಲ ಬಾರಿಗೆ ಗೋಪುರಕ್ಕೆ ಕಲಶ ಪ್ರಸ್ಥಿಸ್ತಪನೆ ಮಾಡಿದ್ದಾರೆ ಆದರೆ ತನ್ನನ್ನು ಆಹ್ವಾನಿಸಿಲ್ಲ, ಅಲ್ಲದೆ ಪ್ರೋಟೋಕಾಲ್ ಹೆಸರಿನಲ್ಲಿ ಜಿಲ್ಲಾಧಿಕಾರಿ ತಮಗೆ ಬೇಕಾದವರನ್ನು ಮನಬಂದಂತೆ ಒಳ ಬಿಟ್ಟುಕೊಂಡು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು

ನಗರಸಭೆ ಸದಸ್ಯರಿಗೆ ಈ ವರೆಗೂ ಒಂದು ಪಾಸ್ ಕೊಟ್ಟಿಲ್ಲ. ಅಲ್ಲದೆ ಸ್ವಾಮೀಜಿಗಳನ್ನು ಉತ್ಸವಕ್ಕೆ ಆಹ್ವಾನಿಸಿಲ್ಲ ಈ ಮೂಲಕ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಇದರಿಂದ ತನಗೆ ಹಾಗೂ ಎಲ್ಲಾ ನಗರಸಭೆ ಸದಸ್ಯರಿಗೆ ಆತ್ಮ ಗೌರವಕ್ಕೆ ಧಕ್ಕೆ ಉಂಟಾಗಿದೆ ಈ ಎಲ್ಲಾ ಕಾರಣದಿಂದ ಪ್ರತಿಭಟನೆ ನಡೆಸುತ್ತಿದ್ದು ತಾನು ಹಕ್ಕು ಚ್ಯುತಿ ಮಂಡನೆ ಮಾಡುವುದಾಗಿ ಹೇಳಿದರು