ವಿಡಿಯೋ ಹರಿಬಿಟ್ಟವರ ಬಂಧನ ಏಕಿಲ್ಲ? ಜೆಡಿಎಸ್ ಮುಖಂಡ ಕವನ್ ಗೌಡ ಪ್ರಶ್ನೆ

ಶಾಸಕ ಇಕ್ಬಾಲ್ ಅಮಾನತು ಮಾಡಬೇಕು

ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಮಹಿಳೆಯರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಜೆಡಿಎಸ್ ಮುಖಂಡ, ವಕೀಲ ಕವನ್ ಗೌಡ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಪಾರ್ಮೆಷನ್ ಆಕ್ಟ್ 67 ಎ ನಲ್ಲಿ  ಈ ಕೃತ್ಯ ಎಸಗಿದವರಿಗೆ ಐದು ವರ್ಷಗಳ ಶಿಕ್ಷೆಯಾಗುವ ಸಾಧ್ಯತೆ ಇದೆ.

ವಿಡಿಯೋ ಹಂಚುವವರು ಅದರಲ್ಲಿರುವ ಮಹಿಳೆಯರ ಗುರುತು ಮರೆ ಮಾಡಿಲ್ಲ. ಇದರಿಂದ ಅವರ ಗೌರವಕ್ಕೆ ಧಕ್ಕೆ ಬಂದಿದೆ. ಈ ಪ್ರಕರಣ ಸಂಬಂಶ ನಲ್ಕೆಯ ನವೀನ್ ಗೌಡ ಎಂಬಾತನ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಆದರೂ ಆತನನ್ನು ವಶಕ್ಕೆ ಪಡೆದಿಲ್ಲ. ಆತನಿಗೆ ವಿಡಿಯೋಗಳು ಹೇಗೆ ಸಿಕ್ಕವು. ಆತನಿಗೆ ಆಶ್ರಯ ನೀಡಿದ್ದು ಯಾರು ಎಂಬುದರ ಬಗ್ಗೆ ಚರ್ಚೆ ಆಗಬೇಕು ಎಂದು ಆಗ್ರಹಿಸಿದರು.

ರಾಮನಗರ ಶಾಸಕ ಇಕ್ಬಾಲ್ ಹುಸೆನ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಕೂಡ ಈಗ ಬಹಿರಂಗವಾಗಿದೆ. ಮಹಿಳಾ ಆಯೋಗದವರು ಈಗ ಏನು ಮಾಡುತ್ತಿದ್ದಾರೆ? ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷ ವಿಡಿಯೋ ಪ್ರಕರಣ ಸಂಬಂಧ ಈಗಾಗಲೇ ಕ್ರಮ ಜರುಗಿಸಿದೆ. ಕಾಂಗ್ರೆಸ್ ಕೂಡ ಕೂಡಲೇ ಶಾಸಕ ಇಕ್ಬಾಲ್ ಅವರನ್ನು ಅಮಾನತು ಮಾಡ್ಬೇಕು. ನವೀನ್ ಅವರನ್ನ ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. ಯಾರೂ ವಿಡಿಯೋಗಳನ್ನು ಹಂಚುವ ಮೂಲಕ ಸಮಾಜದ ಸ್ವಾಸ್ಥ್ಯ ಹಾಳು ಮಾಡಬಾರದು. ವಿಡಿಯೋ ಫಾರ್ವರ್ಡ್ ಮಾಡುವ ವಿಷಯದಲ್ಲಿ ಎಲ್ಲರೂ ಸ್ವಯಂ ನಿಯಂತ್ರ ಅಳವಡಿಸಿಕೊಂಡು ಮಹಿಳೆಯರ ಮಾನ ಹಾನಿಯಾಗುವುದನ್ನು ತಡೆಗಟ್ಟಬೇಕು ಎಂದರು.

ಗ್ರಾಪಂ ಸದಸ್ಯ ರೋಹಿತ್, ರಂಜಿತ್ ಕ್ಯಾಮನಹಳ್ಳಿ ಇದ್ದರು.