ಕೆಲಸದಿಂದ ಕಿತ್ತು ಹಾಕಿದ್ದಕ್ಕೆ ಹಾಸ್ಟೆಲ್ ಮಕ್ಕಳು ಬೀಡಿ ಸೇದುವ ವಿಡಿಯೋ ವೈರಲ್ ಮಾಡಿದ ಅಡುಗೆ ಸಹಾಯಕಿ; ಬಿಕ್ಕೋಡು ಹಾಸ್ಟೆಲ್ ‘ಅಮಲುದಾರರ ವಿಡಿಯೋ’ ಪ್ರಕರಣ ತನಿಖೆಯಲ್ಲಿ ಬಹಿರಂಗ

ಹಾಸನ: ಬೇಲೂರು ತಾಲೂಕಿನ ಬಿಕ್ಕೋಡಿಯ ಮೆಟ್ರಿಕ್ ಪೂರ್ವ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕೆಲ ಮಕ್ಕಳು ಹಾಸ್ಟೆಲ್‌ನ ಆವರಣದಲ್ಲಿ ಬೀಡಿ ಸೇದಿರುವುದು, ವೈಟ್ನರ್ ಸೇವಿಸಿರುವುದು ಹಾಗೂ ಮೊಬೈಲ್ ಬಳಕೆ ಪ್ರಶ್ನಿಸಿದ್ದಕ್ಕೆ ನಿಲಯ ಪಾಲಕರ ಮೇಲೆ ಹಲ್ಲೆಗೆ ಯತ್ನಿಸಿರುವುದು ಸಮಾಜ ಕಲ್ಯಾಣ ಇಲಾಖಾ ಅಧಿಕಾರಿಗಳ ವಿಚಾರಣಾ ವರದಿಯಲ್ಲಿ ಸಾಬೀತಾಗಿದೆ.

ಈ ಹಿನ್ನೆಲೆಯಲ್ಲಿ ಹಾಸ್ಟೆಲ್‌ ವಾರ್ಡನ್ ಆಗಿದ್ದ ವೈ.ಪಿ.ಚಂದ್ರಶೇಖರ್ ವಿರುದ್ಧ ಕರ್ತವ್ಯ ಲೋಪದ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಇಲಾಖಾ ಆಯು ಕ್ತರಿಗೆ ತಾಲೂಕು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ನಡೆಸಿರುವ ಎಲ್ಲಾ ನಿಯಮಬಾಹಿರ ಚಟುವಟಿಕೆಗಳು 2023-24ನೇ ಸಾಲಿನಲ್ಲಿ ನಡೆದವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಬಿಕ್ಕೋಡಿಯ ಹಾಸ್ಟೆಲ್ ವಿದ್ಯಾರ್ಥಿಗಳು ಬೀಡಿ, ಸಿಗರೆಟ್ ಸೇರುತ್ತಿರುವ ಮದ್ಯದ ಅಮಲಿನಲ್ಲಿ ತೇಲಾಡು ತಿರುವಂತಹ ನಿಯಮಬಾಹಿರ ಚಟುವಟಿಕೆಯ ವಿಡಿ ಯೋಗಳು ವೈರಲ್ ಆಗಿ ದ್ದವು. ಜೊತೆಗೆ ಹಾಸ್ಟೆಲ್ ಒಳಗೆ ಮದ್ಯದ ಬಾಟಲ್, ಬೀಡಿ, ಸಿಗರೆಟು ತುಂಡುಗಳು ಪತ್ತೆಯಾಗಿದ್ದವು. ಈ ಬಗ್ಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು.

ಇದನ್ನು ಗಮನಿಸಿದ ಸಿಎಂ ಕಚೇರಿ ತಕ್ಷಣ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡು ಅನುಪಾಲನಾ ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದು ಸೂಚಿಸಿತ್ತು.

ಘಟನೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಬೇಲೂರು ತಾಲ್ಲೂಕು ಸಹಾಯಕ ನಿರ್ದೇಶಕರು ನಡೆಸಿದ ವಿಚಾರಣಾ ವರದಿಯಲ್ಲಿ ಹಾಸ್ಟೆಲ್‌ನ ಕೆಲ ವಿದ್ಯಾರ್ಥಿಗಳು ನಿಯಬಾಹಿರ ಚಟುವಟಿಕೆಗಳನ್ನು ನಡೆಸಿರುವುದು ಖಚಿತವಾಗಿದೆ. ಈ ಚಟುವಟಿಕೆಗಳ ಬಗ್ಗೆ ಹಾಸ್ಟೆಲ್‌ನ ಕೆಲ ಹಿರಿಯ ವಿದ್ಯಾರ್ಥಿಗಳೇ ವಿಡಿಯೋ ಮಾಡಿಕೊಂಡಿದ್ದರು. ಎಲ್ಲಾ ವಿಡಿಯೋಗಳನ್ನು ಹಾಸ್ಟೆಲ್ ನ ಅಡುಗೆ ಸಹಾಯಕಿಯಾಗಿದ್ದ ಸರೋಜಮ್ಮ ವಿದ್ಯಾರ್ಥಿ ಗಳಿಂದ ಪಡೆದುಕೊಂಡಿದ್ದರು. ಆದರೆ, ಸರೋಜಮ್ಮ ಪದೇ ಪದೆ ಕೆಲಸಕ್ಕೆ ಗೈರು ಹಾಜರಾಗುತ್ತಿದ್ದ ಕಾರಣ ಅವರನ್ನು ಕರ್ತವ್ಯದಿಂದ ಬಿಡುಗಡೆ ಮಾಡಿದ ಹಿನ್ನೆಲೆ ಆ ಎಲ್ಲಾ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ನಡೆಸಿದ ನಿಯಮ ಬಾಹಿರ ಚಟುವಟಿಕೆಗಳ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ. ಉನ್ನತ ಅಧಿಕಾರಿಗಳ ಗಮನಕ್ಕೂ ತಾರದೆ ನಿರ್ಲಕ್ಷ್ಯ ತೋರಿರುವ ಹಿನ್ನೆಲೆ ಹಾಸ್ಟೆಲ್‌ನಲ್ಲಿ ನಿಯೋಜನೆ ಮೇಲೆ ವಾರ್ಡನ್ ಆಗಿದ್ದ ವೈ.ಪಿ.ಚಂದ್ರಶೇಖರ್ ನಿಯೋಜನೆಯನ್ನು ಈಗಾಗಲೇ ರದ್ದುಪಡಿಸಲಾಗಿದೆ.

ಅಲ್ಲದೆ, ಸರೋಜಮ್ಮ ಜೊತೆಗೆ ಮತ್ತೋರ್ವ ಅಡುಗೆ ಯವರಾದ ಗಂಗಮ್ಮ, ರಾತ್ರಿ ಕಾವಲುಗಾರ ಆನಂದ್ ಅವರನ್ನೂ ಕರ್ತವ್ಯ ಲೋಪದ ಮೇಲೆ ಕೆಲಸ ದಿಂದ ತೆಗೆದುಹಾಕಲಾಗಿದೆ. ಹಾಸ್ಟೆಲ್ ನಿರ್ವಹಣೆಗೆ ಸಮಸ್ಯೆ ಯಾಗದಂತೆ ಬೇರೆ ಸಿಬ್ಬಂದಿಯನ್ನು ನೇಮಿ ಸಲಾಗಿದೆ. ನಿಯಮಬಾಹಿರ ಚಟುವಟಿಕೆ ನಡೆಸಿದ ವಿದ್ಯಾ ರ್ಥಿಗಳ ಪೋಷಕರನ್ನು ಕರೆಸಿ ವಿಚಾರವನ್ನು ತಿಳಿಸಿ ಅವರವರ ಮನೆಗೆ ಕಳುಹಿಸಲಾಗಿದೆ. ನಂತರ ಪೋಷಕರ ಸಭೆ ನಡೆಸಿ ಹಾಗೂ ವಿದ್ಯಾರ್ಥಿಗಳಿಗೆ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಕೌನ್ಸೆಲಿಂಗ್‌ ನೀಡಲಾಗಿದೆ.