ಸಂಸದರ ನಿವಾಸದಲ್ಲಿ ಸತತ 10ಗಂಟೆ ಸಾಕ್ಷ್ಯ ಸಂಗ್ರಹ: ಪ್ರಜ್ವಲ್ ರೇವಣ್ಣ ಬಳಸುತ್ತಿದ್ದ ದಿಂಬು, ಹೊದಿಕೆ, ಹಾಸಿಗೆ ವಶಕ್ಕೆ ಪಡೆದ ಎಸ್ಐಟಿ

ಪ್ರಜ್ವಲ್ ಮೇಲಿನ ಆರೋಪ ಸಾಬೀತಿಗೆ ಪೋರೆನ್ಸಿಕ್ ಸಾಕ್ಷ್ಯ ಸಂಗ್ರಹಿಸುತ್ತಿರುವ ವಿಶೇಷ ತನಿಖಾ ತಂಡ

ಹಾಸನ: ನಗರದ ಸಂಸದರ ನಿವಾಸದಲ್ಲಿ ನಿನ್ನೆ‌ ಮಧ್ಯಾಹ್ನ  ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ ಟೀಂನಿಂದ ಆರಂಭವಾಗಿದ್ದ  ಪರಿಶೀಲನೆ, ಸಾಕ್ಷ್ಯ ಸಂಗ್ರಹ ಕಾರ್ಯ ಸತತ ಹತ್ತು ಗಂಟೆಗಳ ಕಾಲ ನಡೆಯಿತು.

https://www.instagram.com/reel/C7iQxW9B1kB/?igsh=MXc3eTBqY3AyNTV5NQ==

ಮೇ.31 ಕ್ಕೆ ಪ್ರಜ್ವಲ್‌ರೇವಣ್ಣ ಬರುವ ಹೇಳಿಕೆ ನೀಡಿದ ಬೆನ್ನಲ್ಲೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ ನಗರದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಬೆಳಗಿನ ಜಾವ 4.30ರವರೆಗೆ ಇಲ್ಲಿ ಸಾಕ್ಷ್ಯ ಸಂಗ್ರಹಿಸಿತು.

ಸಂಸದ ಪ್ರಜ್ವಲ್‌ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿತು.