ಹೊಳೆನರಸೀಪುರ ನಗರ ಠಾಣೆ ಎದುರು ಜಮಾಯಿಸುತ್ತಿರುವ ಜನರು: ಸುತ್ತಮುತ್ತಲಿನ ಅಂಗಡಿ, ಮುಂಗಟ್ಟು ಬಂದ್ ಮಾಡಿಸಿದ ಪೊಲೀಸರು

ಹಾಸನ: ಹೊಳೆನರಸೀಪುರ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ದೇವರಾಜೇಗೌಡ ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಚೇರಿ ಮುಂದೆ ಜಮಾಯಿಸಿದ್ದ ನೂರಾರು ಜನರನ್ನು ಚದುರಿಸಿದ ಪೊಲೀಸರು ಸಮೀಪದ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

ಕಚೇರಿ ಆವರಣದಿಂದ ಆಚೆ ಕಳಿಸಿದ ನಂತರ ಇನ್ಸ್‌ಪೆಕ್ಟರ್ ಕಚೇರಿ ಇರುವ ಅಂಗಡಿಗಳ ಮುಂದೆ ಜನರು ನಿಂತು ಗುಂಪುಗೂಡತೊಡಗಿದರು. ಹೀಗಾಗಿ ಅಲ್ಲಿಂದಲೂ ಜನರನ್ನು ಕಳುಹಿಸಿದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದರು.

ದೇವರಾಜೇಗೌಡ ಅವರನ್ನು ವಿಚಾರಣೆಗೊಳಪಡಿಸಲು ಎಸ್ಪಿ ಮಹಮದ್ ಸುಜೀತಾ ಆಗಮಿಸಿದ್ದು, ಎಎಸ್‌ಪಿ ವೆಂಕಟೇಶ್ ನಾಯ್ಡು, ಹೊಳೆನರಸೀಪುರ ಡಿವೈ‌ಎಸ್‌ಪಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ವಿಚಾರಣೆ ನಡೆಸುತ್ತಿರುವ ತಂಡದಲ್ಲಿದ್ದಾರೆ. ಹೇಳಿಕೆ ಪಡೆದ ನಂತರ ಅವರ ಬಂಧನ ಪ್ರಕ್ರಿಯೆ ನಡೆಯಲಿದೆ.

ಮುಂಜಾಗ್ರತಾ ಕ್ರಮವಾಗಿ ನಗರ ಠಾಣೆ ಎದುರು ಕೆಎಸ್ಆರ್ ಪಿ ತುಕಡಿ ನಿಯೋಜಿಸಲಾಗಿದೆ.