ಗ್ರಾಮಸ್ಥರ ಹೆಸರಲ್ಲಿ‌ ಲಕ್ಷಾಂತರ ಸಾಲ:ಖತರ್ನಾಕ್ ದಂಪತಿ ಪರಾರಿ

ತುಮಕೂರು ಜ.27: ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಯಿಂದಾಗಿ ಜನ ಊರಿಗೆ ಊರೇ ಖಾಲಿ ಮಾಡ್ಕೊಂಡು ಹೋಗ್ತಾ ಇದ್ರೆ, ಇಲ್ಲೊಂದು ದಂಪತಿ ಗ್ರಾಮಸ್ಥರ ಹೆಸರಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡ್ಕೊಂಡು ಎಸ್ಕೇಪ್ ಆಗಿದ್ದಾರೆ.

ಚಾಲಾಕಿ ಪ್ರತಾಪ್ ಹಾಗೂ ರತ್ನಮ್ಮ ದಂಪತಿ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಹೋಬಳಿಯ ದೊಡ್ಡಹೊಸಳ್ಳಿ ಗ್ರಾಮದವರು ಎಂದು ಗುರುತಿಸಲಾಗಿದೆ. ಈ ಚಾಲಾಕಿ ದಂಪತಿಗಳಹ ಗ್ರಾಮಸ್ಥರ ಆಧಾರ್ ಹೆಸರಿನಲ್ಲಿ ಮೈಕ್ರೋ ಫೈನಾನ್ಸ್‌ನಿಂದ 50 ಲಕ್ಷಕ್ಕೂ ಅಧಿಕ ಮೊತ್ತದ‌ ಸಾಲವನ್ನು ತಾವೇ ಮಂಜೂರು ಮಾಡಿಕೊಂಡು, ತಾವೇ ಸಾಲದ ಹಣ ಕಟ್ಟುತ್ತೇವೆ ಎಂದು ಪಂಗನಾಮ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

ಹಲವು ಮೈಕ್ರೋಫೈನಾನ್ಸ್ ನವರ ಜೊತೆ ಒಡನಾಟ ಇಟ್ಟುಕೊಂಡಿದ್ದ ಖತರ್ನಾಕ್ ದಂಪತಿ, ಜನರ ಹೆಸರಲ್ಲಿ ಸಾಲ ಮಂಜೂರು ಮಾಡಿಸಿಕೊಂಡಿದ್ದಲ್ಲದೆ, ಆ ಹಣವನ್ನು ತಾವೇ ಕಟ್ಟುವುದಾಗಿ ಜನರಲ್ಲಿ ಹೇಳಿದ್ದರು. ಆದರೆ ಕಳೆದ ಎರಡು ತಿಂಗಳ ಹಿಂದೆಯೇ ಈ ದಂಪತಿ ಊರು ಬಿಟ್ಟು ಪರಾರಿ ಆಗಿರುವುದರಿಂದ, ಹಣ ಕಟ್ಟುವಂತೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಗ್ರಾಮಸ್ಥರ ಹಿಂದೆ ಬಿದ್ದಿದ್ದಾರೆ.