ಹಾಸನ: ತಮಿಳುನಾಡಿನ ತಿರುಪುರ್ ನಲ್ಲಿ ಅಕ್ಟೋಬರ್ 4 ರಿಂದ 6 ರವರೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಿಐಎಸ್‌ಸಿಇ ಬಾಲಕರ ಖೋ ಖೋ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡ 14 ಹಾಗೂ 17 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ, 19 ವರ್ಷದೊಳಗಿನವರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದೆ.
ಕರ್ನಾಟಕ ತಂಡದಲ್ಲಿದ್ದ ಹಾಸನದ ಪೋದಾರ್ ಶಾಲೆಯ ವಿದ್ಯಾರ್ಥಿಗಳಾದ ಗಗನ್ ಗೌಡ, ಹರ್ಷಿತ್, ಕುಶಾಲ್, ಶ್ರವಂತ್, ಪ್ರಥಮ್, ದುಶ್ಯಂತ್, ಪವನ್, ದೀಕ್ಷಿತ್, ವಿವೇಕ್ ಮತ್ತು ಲಕ್ಷಿತ್ ಉತ್ತಮ ಆಟ ಪ್ರದರ್ಶಿಸುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಡಿಸೆಂಬರ್ ಮೊದಲನೇ ವಾರದಲ್ಲಿ ನಡೆಯಲಿರುವ ಎಸ್ ಜಿ ಎಫ್ ಐ ಕ್ರೀಡಾಕೂಟಕ್ಕೆ U-17 ವಿಭಾಗದಲ್ಲಿ ಗಗನ್ ಗೌಡ ಹಾಗೂ ನವಂಬರ್ ಮೂರನೇ ವಾರದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುವ U-14 ವಿಭಾಗದಲ್ಲಿ ಪ್ರಥಮ್ ಲಕ್ಷಿತ್ ಮತ್ತು ದುಶ್ಯಂತ್ ಭಾಗವಹಿಸಲಿದ್ದಾರೆ
ಸಾಧನೆ ಮಾಡಿದ ಎಲ್ಲಾ ಕ್ರೀಡಾಪಟುಗಳಿಗೆ ಶಾಲೆಯ ಪ್ರಾಂಶುಪಾಲ ಜೋಶ್ವ ಪ್ರೇಮ್ ಸ್ವರೂಪ್, ಉಪ ಪ್ರಾಂಶುಪಾಲ ಮುಸೇಬ್, ಆಡಳಿತಾಧಿಕಾರಿ ಮಧು ಹಾಗೂ ಎಲ್ಲಾ ಶಿಕ್ಷಕ ವೃಂದ ಮತ್ತು ಆಡಳಿತ ವರ್ಗ ಶುಭ ಕೋರಿದ್ದಾರೆ.