ನವದೆಹಲಿ ಜ.28: ಎಲೈಟ್ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಸಾಲಿಗೆ ಟೀ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈಗ ಸೇರಿದ್ದಾರೆ. ಟ್ರಾವಿಸ್ ಹೆಡ್, ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರನ್ನು ಹಿಂದಿಕ್ಕಿದ ಬುಮ್ರಾ ಐಸಿಸಿ-2024 ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.
31 ವರ್ಷದ ಬುನ್ರಾ 2024ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 21 ಪಂದ್ಯಗಳನ್ನ ಆಡಿ, ಅದರಲ್ಲಿ 86 ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದ್ದಾರೆ. ಜೊತೆಗೆ 13 ಟೆಸ್ಟ್ ಪಂದ್ಯಗಳಲ್ಲಿ 71 ವಿಕೆಟ್ಗಳನ್ನು ಪಡೆದು, 8 ಟಿ-20 ಪಂದ್ಯಗಳಲ್ಲಿ 15 ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿದ್ದಾರೆ. 2024 ರ ಟಿ-20 ವಿಶ್ವಕಪ್ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕಾಗಿ, ಬುಮ್ರಾ ಕಳೆದ ವರ್ಷ ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎಯಲ್ಲಿ ಜೂನ್ 1 ರಿಂದ 29 ರವರೆಗೆ ನಡೆದ ಪುರುಷರ ಕಿರು ಸ್ವರೂಪದ ಮೆಗಾ ಇವೆಂಟ್ನಲ್ಲಿ ಪಂದ್ಯಾವಳಿಯ ಆಟಗಾರ ಪ್ರಶಸ್ತಿಯನ್ನು ಗೆದ್ದರು.