ಹಾಸನ: ರಸ್ತೆ ವಿಚಾರಕ್ಕೆ ಸೈನಿಕ ಹಾಗೂ ಆತನ ಪತ್ನಿಯ ಮೇಲೆ ನೆರೆಮನೆಯವರಿಂದಲೇ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ನಗರದ ಬಿ.ಟಿ.ಕೊಪ್ಪಲಿನಲ್ಲಿ ನಡೆದಿದೆ.
ದೆಹಲಿಯಲ್ಲಿ ಸೈನಿಕನಾಗಿ ಕೆಲಸ ಮಾಡುತ್ತಿರುವ ಹೆಚ್.ಆರ್. ರಮೇಶ್ ಹಾಗೂ ಮೋಹನಕುಮಾರಿ ಅವರ ಮೇಲೆ ಎದುರು ಮನೆಯ ಕಿರಣ, ಚರಣ, ಭಾಗ್ಯಮ್ಮ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ.
ಸೈನಿಕ ರಮೇಶ್ ಅವರ ಮನೆ ಎದುರು ಭಾಗ್ಯಮ್ಮ ಅವರ ಮನೆಯಿದ್ದು, ಸಾರ್ವಜನಿಕರು ಓಡಾಡುವ ಮೂವತ್ತು ಅಡಿ ರಸ್ತೆಯಲ್ಲಿ, ಹತ್ತು ಅಡಿಯಷ್ಟು ಜಾಗಕ್ಕೆ ಕಲ್ಲುಗಳನ್ನು ಇಟ್ಟು ಭಾಗ್ಯಮ್ಮ ಸಸಿ ನೆಟ್ಟಿದ್ದಾರೆ.
ಅದರಿಂದಾಗಿ ವಾಹನ ಓಡಾಡಕ್ಕೆ ಸಮಸ್ಯೆಯಾಗಿದೆ.
ಇದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿತ್ತು.
ರಮೇಶ್ ತನ್ನ ಪತ್ನಿ ಮಕ್ಕಳೊಂದಿಗೆ ಬರುವಾಗ ಕಾರು ಅಡ್ಡಗಟ್ಟಿದ್ದ ಭಾಗ್ಯಮ್ಮ, ಚರಣ, ಕಿರಣ ಹಲ್ಲೆ ನಡೆಸಿದ್ದಾರೆ. ನಂತರ ಮನೆ ಬಳಿಗೆ ಬಂದು ಚಾಕುವಿನಿಂದ ಇರಿದಿದ್ದಾರೆ.