ಹಾಸನ; ಹಾಸನಾಂಬ ದರ್ಶನಕ್ಕೆ ಹರಿದು ಬರುತ್ತಿರುವ ಭಕ್ತರ ಸಂಖ್ಯೆ ಮಿತಿಮೀರಿದ್ದು, ನಿಯಂತ್ರಣ ಅಸಾಧ್ಯ ಎನ್ನುವಷ್ಟು ಒತ್ತಡ ಏರ್ಪಟ್ಟ ಹಿನ್ನೆಲೆಯಲ್ಲಿ ವಿಶೇಷ ದರ್ಶನದ ಟಿಕೆಟ್, VVIP ಪಾಸ್ ವ್ಯವಸ್ಥೆ ರದ್ದುಗೊಳಿಸಲಾಗಿದೆ.
ದೇವಾಲಯದ ಎಲ್ಲ ಟಿಕೆಟ್ ಸಾಲುಗಳು, ಧರ್ಮದರ್ಶನ, ಗಣ್ಯರ ಪಾಸುಗಳ ಸಾಲು ಕೂಡ ಕಿಲೋಮೀಟರ್ ಗಟ್ಟಲೆ ಉದ್ದಕ್ಕೆ ಬೆಳೆದಿದ್ದು, ಭಾರಿ ಸಂಖ್ಯೆಯಲ್ಲಿ ಜನರು ಮುಖ್ಯದ್ವಾರದ ಎದುರು ಜಮಾಯಿಸಿದ್ದಾರೆ.
ಇದರಿಂದ ಬಿಎಂ ರಸ್ತೆಯಲ್ಲಿ ಭಾರಿ ಒತ್ತಡ ಏರ್ಪಟ್ಟಿದ್ದು ಪೊಲೀಸರು ಜನರನ್ನು ನಿಯಂತ್ರಿಸಲು ಬಲಪ್ರಯೋಗಿಸುವ ಹಂತ ತಲುಪುವಂತಾಗಿತ್ತು. ನೈವೇದ್ಯಕ್ಕಾಗಿ 2 ಗಂಟೆಗೆ ಗರ್ಭಗುಡಿ ಬಾಗಿಲು ಮುಚ್ಚಲಿದ್ದು ಮಧ್ಯಾಹ್ನದ ನಂತರ ಭಕ್ತರ ಒತ್ತಡ ತೀವ್ರಗೊಳ್ಳುವ ಸಾಧ್ಯತೆ ಇದೆ.