ಅರಸೀಕೆರೆ: ತಾಲೂಕಿನ ಸಂಕೋಡನಹಳ್ಳಿ ಗ್ರಾಮದಲ್ಲಿ ಸಂಜೆ ಸುರಿದ ಮಹಾ ಮಳೆಗೆ ಹಳ್ಳ,ಕೊಳ್ಳಗಳು ಉಕ್ಕಿ ಹರಿದಿವೆ.
ಯಾದಾಪುರ-ಸಂಕೋಡನಹಳ್ಳಿ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು ಜನ,ಜಾನುವಾರುಗಳು ದೊಡ್ಡ ಹಳ್ಳ ದಾಟಲು ಪರದಾಡುವಂತಾಯಿತು.
ಹಳ್ಳದ ಬದಿಗೆ ಹೊಂದಿಕೊಂಡಂತಿರುವ ಆನಂದಪ್ಪ,ಈಶ್ವರಪ್ಪ ಸೇರಿದಂತೆ ಸುತ್ತ ಮುತ್ತಲಿನವರ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿತ್ತು. ಬರದ ನಾಡಿನಲ್ಲಿ ವರ್ಷದ ಕೊನೆಯ ಮಳೆಗೆ ಮೈದುಂಬಿದ ನೀರಿನ ವೈಭವ ಕಣ್ತುಂಬಿಕೊಳ್ಳಲು ಜನರು ದೌಡಾಯಿಸಿದ ದೃಶ್ಯ ಕಂಡುಬಂದಿತು. ಹಳೆಯ ಕಲ್ಲನಾಯ್ಕನಹಳ್ಳಿ ಕೆರೆಗೆ ಭಾರೀ ನೀರು ಹರಿದು ಬಂದಿದೆ.