ಹಾಸನ:ದನಗಳ್ಳರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದ ಜನರು| ಮೂವರು ಪೊಲೀಸ್ ವಶಕ್ಕೆ, ಓರ್ವ ಪರಾರಿ

ಹಾಸನ: ಜಾನುವಾರು ಕದಿಯಲು ಬಂದ ಕಳ್ಳರನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹೊಳೆನರಸೀಪುರ ತಾಲ್ಲೂಕು ಮೂಡಲಮಾಯಿಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಟಾಟಾ ಎಸಿ ವಾಹನದಲ್ಲಿ ಬಂದಿದ್ದ ಕಿಡಿಗೇಡಿಗಳು ರಾತ್ರಿ ಹೊತ್ತು ಜಾನುವಾರುಗಳನ್ನು ಕದಿಯುತ್ತಿದ್ದರು.

ನಗರನಹಳ್ಳಿ ಗ್ರಾಮದ ರಾಮು ಎಂಬುವವರ ಎಮ್ಮೆಯನ್ನು ಕದ್ದು ನಂತರ ಕದ್ದಿದ್ದ ಮೂಡಲಮಾಯಿಗೌಡನಹಳ್ಳಿ ಗ್ರಾಮದಲ್ಲಿ ಕರಾಮತ್ತು ಪ್ರದರ್ಶಿಸಲು ಮುಂದಾಗಿದ್ದರು.

ಮೂವರನ್ನು ಹಿಡಿದು ವಿಚಾರಿಸಿದಾಗ ಜಾನುವಾರು ಕದಿಯಲು ಬಂದಿದ್ದೆಂದು ಗೊತ್ತಾಗಿ ಮೂವರನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಥಳಿಸಿದರು. ಗುಂಪಿನಲ್ಲಿದ್ದ ಒಬ್ಬ ಪರಾರಿ ಆಗಿದ್ದಾನೆ.

ಸ್ಥಳಕ್ಕೆ ಹಳ್ಳಿಮೈಸೂರು ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.