ಹಾಸನದಲ್ಲಿ ಮರ ಬಿದ್ದು ಕಾರು ಅಪ್ಪಚ್ಚಿ: ಗಾಳಿ-ಮಳೆ ಆರ್ಭಟ

ಹಾಸನ: ಮಳೆ-ಗಾಳಿಗೆ ಬೃಹತ್ ಗಾತ್ರದ ಮರ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣ ಜಖಂಗೊಂಡ ಘಟನೆ ನಗರದ ಕುವೆಂಪುನಗರದಲ್ಲಿ ನಡೆದಿದೆ.

ಕುವೆಂಪುನಗರದ ರಾಕೇಶ್ ಎಂಬವರಿಗೆ ಸೇರಿದ ಹುಂಡೈ ಇಯಾನ್ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.

ಜಖಂಗೊಂಡಿರುವ ಕಾರು

ಸ್ಥಳಕ್ಕೆ ನಗರಸಭೆ ಸಿಬ್ಬಂದಿ ಆಗಮಿಸಿದ್ದು ಮರ ತೆರವುಗೊಳಿಸುತ್ತಿದ್ದಾರೆ. ಭಾನುವಾರ ರಾತ್ರಿಯಿಂದ ನಗರದಲ್ಲಿ ಮುಂಗಾರು ಚುರುಕುಗೊಂಡಿದ್ದು ಬಿರುಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.