ದೇವಾಲಯದ ತೇರಿನ ಮನೆ ನಿರ್ಮಾಣದ ವೇಳೆ ಅವಘಡ; ವಿದ್ಯುತ್ ಆಘಾತಕ್ಕೆ ಎಲೆಕ್ಟ್ರೀಷಿಯನ್ ಬಲಿ

ಹಾಸನ: ದೇವಾಲಯ ತೇರು ನಿಲುಗಡೆ ಮನೆ ನಿರ್ಮಾಣ‌ ಕಾಮಗಾರಿ ವೇಳೆ ವಿದ್ಯುತ್ ಆಘಾತಕ್ಕೆ ಎಲೆಕ್ಟ್ರೀಷಿಯನ್ ಬಲಿಯಾಗಿರುವ ಘಟನೆ‌ ಚನ್ನರಾಯಪಟ್ಟಣ ತಾಲ್ಲೂಕಿನ, ಕಲ್ಕೆರೆ ಗ್ರಾಮದಲ್ಲಿ ಬುಧವಾರ ನಡೆದಿದೆ.

ಚನ್ನರಾಯಪಟ್ಟಣ ನಿವಾಸಿ ಮುಂಜಾಮಲ್ (28) ಮೃತ ಯುವಕ.

ಕಲ್ಕೆರೆ ಗ್ರಾಮದ ದೇವಾಲಯದ ಆವರಣದಲ್ಲಿ ನಡೆಯುತ್ತಿದ್ದ ತೇರು ನಿಲ್ಲಿಸುವ ಮನೆಯ ಕಾಮಗಾರಿ ವೇಳೆ
ಡ್ರಿಲ್ಲಿಂಗ್ ಮಾಡುತ್ತಿದ್ದ ಮುಂಜಾಮಿಲ್‌ಗೆ ವಿದ್ಯುತ್ ಶಾಕ್ ಹೊಡೆದಿದೆ.

ತೀವ್ರ ವಿದ್ಯುತ್ ಆಘಾತದಿಂದ ಅವರು ಸ್ಥಳದಲ್ಲೇ‌ ಕುಸಿದು ಬಿದ್ದು ಸಾವನ್ನಪ್ಪಿದರು. ನುಗ್ಗೇಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.